ಹಿಂದಿನ ಎಚ್ ಡಿ ಎಫ್ ಸಿ ಲಿಮಿಟೆಡ್ ಗ್ರಾಹಕರಿಗೆ ಪ್ರಮುಖ ಸಂವಹನ

ಎಚ್ ಡಿ ಎಫ್ ಸಿ ಬ್ಯಾಂಕ್ ಲಿಮಿಟೆಡ್ ("ಎಚ್ ಡಿ ಎಫ್ ಸಿ ಬ್ಯಾಂಕ್") ನೊಂದಿಗೆ ಹಿಂದಿನ ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಶನ್ ("ಇ-ಎಚ್ ಡಿ ಎಫ್ ಸಿ ಲಿಮಿಟೆಡ್") ವಿಲೀನಕ್ಕೆ ಅನುಗುಣವಾಗಿ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಸಲಹೆ ನೀಡಿದಂತೆ, ಗ್ರಾಹಕರಿಗೆ ವಿಧಿಸಲಾಗುವ ಅಂತಿಮ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲದ ರೀತಿಯಲ್ಲಿ ಇ-ಎಚ್ ಡಿ ಎಫ್ ಸಿ ಲಿಮಿಟೆಡ್‌ನ ಎಲ್ಲಾ ಗ್ರಾಹಕರ ಫ್ಲೋಟಿಂಗ್ ಬಡ್ಡಿ ದರವನ್ನು ಎಚ್ ಡಿ ಎಫ್ ಸಿ ಬ್ಯಾಂಕ್‌ಗೆ ಅನ್ವಯವಾಗುವ ಬಾಹ್ಯ ಬೆಂಚ್‌ಮಾರ್ಕ್‌ಗೆ ವಲಸೆ ಮಾಡಲಾಯಿತು. ಈ ವಿಷಯದ ಕುರಿತಾದ ಸಂವಹನವನ್ನು ಮೇಲ್ ಮೂಲಕ ಆಗಸ್ಟ್ 12, 2023 ರಿಂದ ಸೆಪ್ಟೆಂಬರ್ 16, 2023 ನಡುವೆ ಎಲ್ಲಾ ಗ್ರಾಹಕರಿಗೆ ಕಳುಹಿಸಲಾಗಿದೆ.

ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವುದನ್ನು ಮುಂದುವರಿಸುವ ಉದ್ದೇಶದಿಂದ, ಇ-ಎಚ್ ಡಿ ಎಫ್ ಸಿ ಲಿಮಿಟೆಡ್‌ನ ಎಲ್ಲಾ ರಿಟೇಲ್ ಗ್ರಾಹಕರು (ವಿಲೀನದ ದಿನಾಂಕದಂದು) ತಮ್ಮ ಅರ್ಹತೆಯ ಪ್ರಕಾರ ಬಾಹ್ಯ ಬೆಂಚ್‌ಮಾರ್ಕ್‌ಗೆ ಲಿಂಕ್ ಆಗಿರುವ ತಮ್ಮ ಪ್ರಸ್ತುತ ಬಡ್ಡಿ ದರದ ಸ್ಪ್ರೆಡ್ ಅನ್ನು ಮರು-ಹೊಂದಿಸುವ ಒಂದು ಬಾರಿಯ ಆಯ್ಕೆಯನ್ನು ಪಡೆಯಲು ಬ್ಯಾಂಕ್ ಅನ್ನು ಸಂಪರ್ಕಿಸಬಹುದು. ಈ ಒಂದು ಬಾರಿಯ ಆಯ್ಕೆಗೆ ಯಾವುದೇ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ.
 

... ಹೆಚ್ಚು ಓದಿ

ಮುಂದಿನ ಹಂತಗಳು:

- ನೀವು ರಿಟೇಲ್ ಗ್ರಾಹಕರಾಗಿದ್ದರೆ, ನಿಮ್ಮ ಅರ್ಹತೆಯ ಪ್ರಕಾರ ಬಾಹ್ಯ ಬೆಂಚ್‌ಮಾರ್ಕ್‌ನೊಂದಿಗೆ ಲಿಂಕ್ ಆಗಿರುವ ನಿಮ್ಮ ಪ್ರಸ್ತುತ ಬಡ್ಡಿ ದರವನ್ನು ಮರು-ಹೊಂದಿಸಲು ನೀವು ಒಂದು-ಬಾರಿಯ ಆಯ್ಕೆಯನ್ನು ಹೊಂದಿದ್ದೀರಿ. ಆದಾಗ್ಯೂ, ನೀವು 1 ನೇ ಜುಲೈ 2023 ಕ್ಕಿಂತ ಮೊದಲು ಎಚ್ ಡಿ ಎಫ್ ಸಿ ಲಿಮಿಟೆಡ್‌ನಿಂದ ಲೋನ್ ಪಡೆದಿದ್ದರೆ ಮತ್ತು ನಂತರದಲ್ಲಿ ನಿಮ್ಮ ಲೋನ್ ಅನ್ನು 1ನೇ ಜುಲೈ 2023 ರಿಂದ ಇಲ್ಲಿಯವರೆಗೆ ಪರಿವರ್ತಿಸಿದ್ದರೆ, ದಯವಿಟ್ಟು ಈ ಸಂವಹನವನ್ನು ನಿರ್ಲಕ್ಷಿಸಿ.
- ಈ ಆಯ್ಕೆಯನ್ನು ಬಳಸಲು, ದಯವಿಟ್ಟು ಯಾವುದೇ ಎಚ್ ಡಿ ಎಫ್ ಸಿ ಬ್ಯಾಂಕ್ ಹೋಮ್ ಲೋನ್ ಬ್ರಾಂಚ್‌ಗೆ ಭೇಟಿ ನೀಡಿ ಅಥವಾ ನಮ್ಮ ವೆಬ್‌ಸೈಟ್‌ನಲ್ಲಿ ಗ್ರಾಹಕ ಪೋರ್ಟಲ್ ಗೆ ಲಾಗಿನ್ ಮಾಡಿ.

ನೀವು ನಮ್ಮಲ್ಲಿ ಇಟ್ಟಿರುವ ನಿರಂತರ ವಿಶ್ವಾಸವನ್ನು ನಾವು ಪ್ರಶಂಸಿಸುತ್ತೇವೆ ಮತ್ತು ನಮ್ಮ ಸೇವೆಗಳಿಂದ ನೀವು ತೃಪ್ತರಾಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ.

ಕಡಿಮೆ ಓದಿ