ನಿಮ್ಮ ಲೋನ್ ಅವಶ್ಯಕತೆಗಳ ಬಗ್ಗೆ ನಮಗೆ ತಿಳಿಸಿ

ನನ್ನ ವಸತಿಯ ಮಾಹಿತಿ

ಹೋಮ್ ಲೋನ್‌ ಬಡ್ಡಿ ದರ

ಎಚ್ ಡಿ ಎಫ್ ಸಿ ಬ್ಯಾಂಕ್ ವಾರ್ಷಿಕ 8.75*% ರಿಂದ ಆರಂಭವಾಗುವ ಕಡಿಮೆ ಹೋಮ್ ಫೈನಾನ್ಸ್ ಬಡ್ಡಿ ದರಗಳನ್ನು ನೀಡುತ್ತದೆ. ಈ ಬಡ್ಡಿ ದರವು ಹೋಮ್ ಲೋನ್‌ಗಳು, ಬ್ಯಾಲೆನ್ಸ್ ಟ್ರಾನ್ಸ್‌ಫರ್ ಲೋನ್‌ಗಳು, ಮನೆ ನವೀಕರಣ ಮತ್ತು ಮನೆ ವಿಸ್ತರಣೆ ಲೋನ್‌ಗಳಿಗೆ ಅನ್ವಯವಾಗುತ್ತದೆ.

ಎಚ್ ಡಿ ಎಫ್ ಸಿ ಬ್ಯಾಂಕ್ ಫ್ಲೋಟಿಂಗ್ ದರದ ಲೋನ್ ಎಂದು ಕೂಡ ಕರೆಯಲ್ಪಡುವ ಹೊಂದಾಣಿಕೆ ಮಾಡಬಹುದಾದ ದರದ ಲೋನ್ ಮತ್ತು ಟ್ರುಫಿಕ್ಸೆಡ್ ಲೋನ್ ಅನ್ನು ಒದಗಿಸುತ್ತದೆ, ಇದರಲ್ಲಿ ಹೋಮ್ ಲೋನ್ ಮೇಲಿನ ಬಡ್ಡಿ ದರವು ನಿರ್ದಿಷ್ಟ ಅವಧಿಗೆ ಫಿಕ್ಸೆಡ್ ಆಗಿರುತ್ತದೆ (ಸಂಪೂರ್ಣ ಲೋನ್ ಅವಧಿಯ ಮೊದಲ ಎರಡು ವರ್ಷಗಳು ಎಂದು ಅಂದುಕೊಳ್ಳೋಣ), ಇದರ ನಂತರ ಅದು ಹೊಂದಾಣಿಕೆ ಮಾಡಬಹುದಾದ ದರದ ಲೋನ್ ಆಗಿ ಪರಿವರ್ತನೆಗೊಳ್ಳುತ್ತದೆ.

ಹೊಂದಾಣಿಕೆ ಮಾಡಬಹುದಾದ ಹೋಮ್ ಲೋನ್ ದರಗಳು

ಎಲ್ಲಾ ದರಗಳನ್ನು ಪಾಲಿಸಿ ರೆಪೋ ದರಕ್ಕೆ ಬೆಂಚ್‌ಮಾರ್ಕ್ ಮಾಡಲಾಗಿದೆ. ಪ್ರಸ್ತುತ ಅನ್ವಯವಾಗುವ ರೆಪೋ ದರ = 6.50%

ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿಗಳಿಗೆ ವಿಶೇಷ ಹೌಸಿಂಗ್ ಲೋನ್ ದರಗಳು (ವೃತ್ತಿಪರರು ಮತ್ತು ವೃತ್ತಿಪರರಲ್ಲದವರು)
ಲೋನ್ ಸ್ಲ್ಯಾಬ್ ಬಡ್ಡಿ ದರಗಳು (% ವರ್ಷಕ್ಕೆ)
ಎಲ್ಲಾ ಲೋನ್‌ಗಳಿಗೆ* ಪಾಲಿಸಿ ರೆಪೋ ದರ + 2.25% ರಿಂದ 3.15% = 8.75% ರಿಂದ 9.65%
ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿಗಳಿಗೆ ಸ್ಟ್ಯಾಂಡರ್ಡ್ ಹೌಸಿಂಗ್ ಲೋನ್ ದರಗಳು (ವೃತ್ತಿಪರರು ಮತ್ತು ವೃತ್ತಿಪರರಲ್ಲದವರು)
ಲೋನ್ ಸ್ಲ್ಯಾಬ್ ಬಡ್ಡಿ ದರಗಳು (% ವರ್ಷಕ್ಕೆ)
ಎಲ್ಲಾ ಲೋನ್‌ಗಳಿಗೆ* ಪಾಲಿಸಿ ರೆಪೋ ದರ + 2.90% ರಿಂದ 3.45% = 9.40% ರಿಂದ 9.95%

*ಮೇಲಿನ ಹೋಮ್ ಲೋನ್ ಬಡ್ಡಿ ದರಗಳು/ EMI ಎಚ್ ಡಿ ಎಫ್ ಸಿ ಬ್ಯಾಂಕ್‌ನ ಹೊಂದಾಣಿಕೆಯ ದರದ ಹೋಮ್ ಲೋನ್ ಸ್ಕೀಮ್ (ಫ್ಲೋಟಿಂಗ್ ಬಡ್ಡಿ ದರ) ಅಡಿಯಲ್ಲಿ ಲೋನ್‌ಗಳಿಗೆ ಅನ್ವಯವಾಗುತ್ತದೆ ಮತ್ತು ವಿತರಣೆಯ ಸಮಯದಲ್ಲಿ ಬದಲಾವಣೆಗೆ ಒಳಪಟ್ಟಿರುತ್ತವೆ. ಮೇಲಿನ ಹೋಮ್ ಲೋನ್ ಬಡ್ಡಿ ದರಗಳು ಎಚ್ ಡಿ ಎಫ್ ಸಿ ಬ್ಯಾಂಕ್‌ನ ರೆಪೋ ದರಕ್ಕೆ ಲಿಂಕ್ ಆಗಿವೆ ಮತ್ತು ಲೋನ್ ಅವಧಿಯುದ್ದಕ್ಕೂ ಬದಲಾಗುತ್ತವೆ. ಎಲ್ಲಾ ಲೋನ್‌ಗಳು ಎಚ್ ಡಿ ಎಫ್ ಸಿ ಬ್ಯಾಂಕ್‌ನ ಸ್ವಂತ ವಿವೇಚನೆಗೆ ಒಳಪಟ್ಟಿವೆ. ಮೇಲಿನ ಲೋನ್ ಸ್ಲ್ಯಾಬ್‌ಗಳು ಮತ್ತು ಬಡ್ಡಿ ದರಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

*ಎಚ್ ಡಿ ಎಫ್ ಸಿ ಬ್ಯಾಂಕ್ ಯಾವುದೇ ಸಾಲ ನೀಡುವ ಸೇವಾ ಪೂರೈಕೆದಾರರಿಂದ (LSP ಗಳು) ಯಾವುದೇ ಹೋಮ್ ಲೋನ್ ಬಿಸಿನೆಸ್ ಅನ್ನು ಪಡೆಯುವುದಿಲ್ಲ.

ಹೋಮ್ ಲೋನಿಗಾಗಿ ನೀವು ಎಚ್ ಡಿ ಎಫ್ ಸಿ ಬ್ಯಾಂಕನ್ನು ಏಕೆ ಆಯ್ಕೆ ಮಾಡಬೇಕು?

ನಿಮ್ಮ ಹೋಮ್ ಲೋನಿಗಾಗಿ ಎಚ್ ಡಿ ಎಫ್ ಸಿ ಬ್ಯಾಂಕನ್ನು ಆಯ್ಕೆ ಮಾಡುವುದು ಹಲವಾರು ಉತ್ತಮ ಪ್ರಯೋಜನಗಳೊಂದಿಗೆ ಬರುತ್ತದೆ. ಮನೆ ಹೊಂದುವ ಮಹತ್ವವನ್ನು ಗುರುತಿಸುವ ಎಚ್ ಡಿ ಎಫ್ ಸಿ ಬ್ಯಾಂಕ್, ನಿಮ್ಮ ಕನಸಿನ ವಾಸದ ಸ್ಥಳವನ್ನು ನಿರ್ಮಿಸುವ ಪ್ರಕ್ರಿಯೆಯನ್ನು ಸರಳಗೊಳಿಸಲು ವಿನ್ಯಾಸಗೊಳಿಸಲಾದ ಹೋಮ್ ಲೋನ್‌ಗಳನ್ನು ಒದಗಿಸುತ್ತದೆ. ಆಕರ್ಷಕ ಹೋಮ್ ಲೋನ್ ಬಡ್ಡಿ ದರಗಳು ಮತ್ತು ಸುಲಭ ಮರುಪಾವತಿ ಸೌಲಭ್ಯಗಳೊಂದಿಗೆ, ಎಚ್ ಡಿ ಎಫ್ ಸಿ ಬ್ಯಾಂಕ್ ನಿಮ್ಮ ಮನೆ ಮಾಲೀಕತ್ವದ ಪ್ರಯಾಣವನ್ನು ಸಾಧಿಸಲು ಮಾತ್ರವಲ್ಲದೆ ಆರ್ಥಿಕವಾಗಿ ಅನುಕೂಲಕರವಾಗಿದೆ ಎಂದು ಖಚಿತಪಡಿಸುತ್ತದೆ. ಸ್ಪರ್ಧಾತ್ಮಕ ಹೋಮ್ ಲೋನ್ ದರಗಳನ್ನು ಮೀರಿ, ನಿಮ್ಮ ಹಣಕಾಸಿನ ಗುರಿಗಳೊಂದಿಗೆ ಹೊಂದಿಕೊಳ್ಳುವ ಹಣಕಾಸನ್ನು ಸರಳವಾಗಿಸುವ ಲೋನ್ ಪ್ಯಾಕೇಜುಗಳನ್ನು ಎಚ್ ಡಿ ಎಫ್ ಸಿ ಬ್ಯಾಂಕ್ ಒದಗಿಸುತ್ತದೆ. ನೀವು ನಿಮ್ಮ ಹೋಮ್ ಲೋನಿಗಾಗಿ ಎಚ್ ಡಿ ಎಫ್ ಸಿ ಬ್ಯಾಂಕನ್ನು ಆಯ್ಕೆ ಮಾಡಿದಾಗ, ಮನೆ-ಮಾಲೀಕತ್ವವನ್ನು ತಡೆರಹಿತ ಮತ್ತು ಲಾಭದಾಯಕ ಅನುಭವವನ್ನಾಗಿಸುವ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವ ವಿಶ್ವಾಸಾರ್ಹ ಸಂಸ್ಥೆಯನ್ನು ನೀವು ಆಯ್ಕೆ ಮಾಡುತ್ತೀರಿ.

 

 

ಹೋಮ್ ಲೋನ್ ಬಡ್ಡಿ ದರಗಳ ವಿಧಗಳು


ಎಚ್ ಡಿ ಎಫ್ ಸಿ ಬ್ಯಾಂಕ್ ಹೋಮ್ ಲೋನ್ ಗ್ರಾಹಕರು ಹೋಮ್ ಲೋನ್ ಪಡೆಯುವಾಗ ಎರಡು ರೀತಿಯ ಬಡ್ಡಿ ದರದ ಆಯ್ಕೆಗಳನ್ನು ಆರಿಸಿಕೊಳ್ಳಬಹುದು. ಇವುಗಳು ಈ ರೀತಿಯಾಗಿವೆ:

ಹೊಂದಾಣಿಕೆ ಮಾಡಬಹುದಾದ ದರದ ಹೋಮ್ ಲೋನ್ (ARHL):
 ಹೊಂದಾಣಿಕೆ ಮಾಡಬಹುದಾದ ದರದ ಹೋಮ್ ಲೋನನ್ನು ಫ್ಲೋಟಿಂಗ್ ಅಥವಾ ವೇರಿಯೇಬಲ್ ದರದ ಲೋನ್ ಎಂದು ಕೂಡ ಕರೆಯಲಾಗುತ್ತದೆ. ARHL ನಲ್ಲಿನ ಬಡ್ಡಿ ದರವು ಎಚ್ ಡಿ ಎಫ್ ಸಿ ಬ್ಯಾಂಕಿನ ಬಾಹ್ಯ ಬೆಂಚ್‌ಮಾರ್ಕ್ ಸಾಲ ದರ, ಅಂದರೆ ಪಾಲಿಸಿ ರೆಪೋ ದರಕ್ಕೆ ಲಿಂಕ್ ಆಗಿದೆ. ಪಾಲಿಸಿ ರೆಪೋ ದರದಲ್ಲಿನ ಯಾವುದೇ ಬದಲಾವಣೆಯು ಅನ್ವಯವಾಗುವ ಬಡ್ಡಿ ದರಗಳಲ್ಲಿ ಬದಲಾವಣೆಯನ್ನು ಮಾಡಬಹುದು.

ಟ್ರುಫಿಕ್ಸೆಡ್ ಲೋನ್
: ಟ್ರುಫಿಕ್ಸೆಡ್ ಲೋನ್‌ನಲ್ಲಿ, ಹೋಮ್ ಲೋನ್ ಬಡ್ಡಿ ದರವು ನಿರ್ದಿಷ್ಟ ಅವಧಿಗೆ (ಉದಾ: ಲೋನ್ ಅವಧಿಯ ಮೊದಲ 2 ಅಥವಾ 3 ವರ್ಷಗಳಿಗೆ) ಫಿಕ್ಸೆಡ್ ಆಗಿರುತ್ತದೆ, ಇದರ ನಂತರ ಅನ್ವಯವಾಗುವ ಬಡ್ಡಿ ದರಗಳೊಂದಿಗೆ ಅದು ಹೊಂದಾಣಿಕೆ ಮಾಡಬಹುದಾದ ದರದ ಹೋಮ್ ಲೋನ್ ಆಗಿ ಆಟೋಮ್ಯಾಟಿಕ್ ಆಗಿ ಪರಿವರ್ತನೆಗೊಳ್ಳುತ್ತದೆ. ಎಚ್ ಡಿ ಎಫ್ ಸಿ ಬ್ಯಾಂಕ್ ಸದ್ಯಕ್ಕೆ ಲೋನ್ ಅವಧಿಯ ಮೊದಲ ಎರಡು ವರ್ಷಗಳಿಗೆ ಬಡ್ಡಿ ದರವನ್ನು ನಿಗದಿಪಡಿಸಲಾದ ಟ್ರುಫಿಕ್ಸೆಡ್ ಲೋನನ್ನು ಒದಗಿಸುತ್ತದೆ.

 

ಹೋಮ್ ಲೋನ್ ಬಡ್ಡಿ ದರಗಳ ಮೇಲೆ ಪರಿಣಾಮ ಬೀರುವ ಅಂಶಗಳು


ಹೋಮ್ ಲೋನ್‌ಗಳ ಮೇಲಿನ ಬಡ್ಡಿ ದರಗಳು ಮೂಲ ದರದ ಜೊತೆಗೆ ವಿವಿಧ ಅಂಶಗಳಿಂದ ಪ್ರಭಾವಿತವಾಗಿವೆ. ಕೆಲವು ಪ್ರಮುಖ ಪರಿಗಣನೆಗಳು ಇಲ್ಲಿವೆ:

ಕ್ರೆಡಿಟ್ ಸ್ಕೋರ್: ಹೋಮ್ ಲೋನ್ ಮೇಲಿನ ಬಡ್ಡಿ ದರವನ್ನು ನಿರ್ಧರಿಸುವಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೆಚ್ಚಿನ ಕ್ರೆಡಿಟ್ ಸ್ಕೋರ್ ಸಾಮಾನ್ಯವಾಗಿ ಹೆಚ್ಚು ಅನುಕೂಲಕರ ದರಕ್ಕೆ ಕಾರಣವಾಗುತ್ತದೆ, ಏಕೆಂದರೆ ಇದು ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಪ್ರತಿಬಿಂಬಿಸುತ್ತದೆ.
 

ಲೋನ್ ಮೊತ್ತ: ನೀವು ಪಡೆಯುವ ಮೊತ್ತವು ಬಡ್ಡಿ ದರದ ಮೇಲೆ ಪರಿಣಾಮ ಬೀರಬಹುದು. ಸಾಮಾನ್ಯವಾಗಿ, ಕಡಿಮೆ ಲೋನ್-ಟು-ವ್ಯಾಲ್ಯೂ ಅನುಪಾತಗಳು ಹೆಚ್ಚು ಸ್ಪರ್ಧಾತ್ಮಕ ದರಗಳಿಗೆ ಕಾರಣವಾಗಬಹುದು.

ಬಡ್ಡಿ ದರದ ಬಗೆ: ನೀವು ಫಿಕ್ಸೆಡ್ ಅಥವಾ ಫ್ಲೋಟಿಂಗ್ ಬಡ್ಡಿ ದರವನ್ನು ಆಯ್ಕೆ ಮಾಡಿದರೆ ಅದು ನಿಮ್ಮ ಹೋಮ್ ಲೋನ್ ದರದ ಮೇಲೆ ಪ್ರಭಾವ ಬೀರಬಹುದು. ಫಿಕ್ಸೆಡ್ ದರಗಳು ಸ್ಥಿರತೆಯನ್ನು ಒದಗಿಸುತ್ತವೆ, ಆದರೆ ಫ್ಲೋಟಿಂಗ್ ದರಗಳು ಮಾರುಕಟ್ಟೆ ಪರಿಸ್ಥಿತಿಗಳ ಆಧಾರದ ಮೇಲೆ ಬದಲಾಗಬಹುದು.

ಆದಾಯ ಮತ್ತು ಉದ್ಯೋಗ ಸ್ಥಿರತೆ: ಸಾಲದಾತರು ಸಾಮಾನ್ಯವಾಗಿ ನಿಮ್ಮ ಆದಾಯ ಮತ್ತು ಉದ್ಯೋಗ ಇತಿಹಾಸವನ್ನು ಪರಿಗಣಿಸುತ್ತಾರೆ. ಸ್ಥಿರ ಆದಾಯ ಮತ್ತು ಉದ್ಯೋಗವು ನೀಡಲಾಗುವ ಬಡ್ಡಿ ದರದ ಮೇಲೆ ಸಕಾರಾತ್ಮಕ ಪ್ರಭಾವ ಬೀರಬಹುದು.

ಮಾರುಕಟ್ಟೆ ಪರಿಸ್ಥಿತಿಗಳು: ಹೋಮ್ ಲೋನ್ ಬಡ್ಡಿ ದರಗಳು ವಿಶಾಲ ಮ್ಯಾಕ್ರೋ ಆರ್ಥಿಕ ಅಂಶಗಳು ಮತ್ತು ಮಾರುಕಟ್ಟೆ ಪರಿಸ್ಥಿತಿಗಳಿಂದ ಕೂಡ ಪ್ರಭಾವಿತವಾಗಿವೆ. ಆರ್ಥಿಕತೆಯಲ್ಲಿನ ಬದಲಾವಣೆಗಳು ದರಗಳ ಮೇಲೆ ಪರಿಣಾಮ ಬೀರಬಹುದು.

 

ಬಡ್ಡಿ ದರದ ಪಾವತಿಗಳನ್ನು ಲೆಕ್ಕ ಹಾಕಲು ವಿವಿಧ ವಿಧಾನಗಳು
 

ಬಡ್ಡಿ ದರದ ಪಾವತಿಗಳ ಲೆಕ್ಕಾಚಾರವನ್ನು ವಿವಿಧ ವಿಧಾನಗಳ ಮೂಲಕ ಪಡೆಯಬಹುದು, ಇದು ನೀವು ನಿಮ್ಮ ಜೀವಮಾನದಲ್ಲಿ ಎಷ್ಟು ಲೋನ್ ಪಾವತಿಸುತ್ತೀರಿ ಎಂಬುದರ ಮೇಲೆ ಪ್ರತಿಯೊಂದೂ ಪರಿಣಾಮ ಬೀರುತ್ತದೆ. ಬಡ್ಡಿ ದರದ ಪಾವತಿಗಳನ್ನು ಲೆಕ್ಕ ಹಾಕಲು ವಿವಿಧ ವಿಧಾನಗಳು ಇಲ್ಲಿವೆ:

 

ಸರಳ ಬಡ್ಡಿ ವಿಧಾನ:

 

ಈ ವಿಧಾನವು ಅಸಲು ಮೊತ್ತ ಮತ್ತು ಬಡ್ಡಿ ದರದ ಆಧಾರದ ಮೇಲೆ ಮಾತ್ರ ಬಡ್ಡಿಯನ್ನು ಲೆಕ್ಕ ಹಾಕುತ್ತದೆ. ಇದು ಸರಳವಾದ ಲೆಕ್ಕಾಚಾರವಾಗಿದೆ ಮತ್ತು ಸಾಮಾನ್ಯವಾಗಿ ಅಲ್ಪಾವಧಿಯ ಲೋನ್‌ಗಳಿಗೆ ಬಳಸಲಾಗುತ್ತದೆ.

 

ಚಕ್ರಬಡ್ಡಿ ವಿಧಾನ:

 

ಚಕ್ರಬಡ್ಡಿಯು ಅಸಲು ಮೊತ್ತ ಮತ್ತು ಬಡ್ಡಿ ದರವನ್ನು ಮಾತ್ರವಲ್ಲದೆ ಹಿಂದಿನ ಅವಧಿಗಳಲ್ಲಿ ಸಂಗ್ರಹಿಸಲಾದ ಬಡ್ಡಿಯನ್ನು ಕೂಡ ಪರಿಗಣಿಸುತ್ತದೆ. ಇದು ಬಡ್ಡಿಯ ಮೇಲಿನ ಬಡ್ಡಿಯ ಬೆಳವಣಿಗೆಗೆ ಕಾರಣವಾಗುತ್ತದೆ, ಇದು ದೀರ್ಘಾವಧಿಯ ಲೋನ್‌ಗಳಿಗೆ ಸಾಮಾನ್ಯ ವಿಧಾನವಾಗಿದೆ.

 

ನಿಗದಿತ ಬಡ್ಡಿ ದರ:

 

ಫಿಕ್ಸೆಡ್ ಬಡ್ಡಿ ದರದೊಂದಿಗೆ, ಲೋನ್ ಅವಧಿಯುದ್ದಕ್ಕೂ ದರವು ಸ್ಥಿರವಾಗಿರುತ್ತದೆ. ಮಾಸಿಕ ಪಾವತಿಗಳನ್ನು ಅಂದಾಜು ಮಾಡಬಹುದು, ಬಜೆಟ್ ಮಾಡಲು ಸ್ಥಿರತೆಯನ್ನು ಒದಗಿಸುತ್ತದೆ. ಇದು ಸಾಂಪ್ರದಾಯಿಕ ಹೋಮ್ ಲೋನ್‌ಗಳಿಗೆ ಸಾಮಾನ್ಯ ವಿಧಾನವಾಗಿದೆ.

 

ಫ್ಲೋಟಿಂಗ್ ಅಥವಾ ಹೊಂದಾಣಿಕೆ ಮಾಡಬಹುದಾದ ಬಡ್ಡಿ ದರ:

 

ಫಿಕ್ಸೆಡ್ ದರಗಳಂತೆ, ಫ್ಲೋಟಿಂಗ್ ಅಥವಾ ಹೊಂದಾಣಿಕೆ ಮಾಡಬಹುದಾದ ದರಗಳು ಮಾರುಕಟ್ಟೆ ಪರಿಸ್ಥಿತಿಗಳ ಆಧಾರದ ಮೇಲೆ ನಿಯತಕಾಲಿಕವಾಗಿ ಬದಲಾಗಬಹುದು. ಇದು ಪಾವತಿಗಳಲ್ಲಿ ಏರಿಳಿತಗಳಿಗೆ ಕಾರಣವಾಗಬಹುದು, ಮಾರುಕಟ್ಟೆ ಬಡ್ಡಿ ದರಗಳು ಕಡಿಮೆಯಾದಾಗ ಇದು ಪ್ರಯೋಜನಕಾರಿಯಾಗಬಹುದು.

 

ವಾರ್ಷಿಕ ಶೇಕಡಾವಾರು ದರ (APR):

 

APR ಬಡ್ಡಿ ಮತ್ತು ಹೆಚ್ಚುವರಿ ಶುಲ್ಕಗಳನ್ನು ಒಳಗೊಂಡಂತೆ ಸಾಲದ ಒಟ್ಟು ವೆಚ್ಚವನ್ನು ಪ್ರತಿನಿಧಿಸುತ್ತದೆ. ಇದು ಲೋನಿನ ನೈಜ ವೆಚ್ಚದ ಸಮಗ್ರ ನೋಟವನ್ನು ಒದಗಿಸುತ್ತದೆ ಮತ್ತು ವಿವಿಧ ಸಾಲದಾತರಿಂದ ಲೋನ್ ಆಫರ್‌ಗಳನ್ನು ಹೋಲಿಕೆ ಮಾಡಲು ಉಪಯುಕ್ತವಾಗಿದೆ.

 

ವಿವಿಧ ನಗರಗಳಲ್ಲಿ ಹೋಮ್ ಲೋನ್‌ಗೆ ಅಪ್ಲೈ ಮಾಡಿ

ಪ್ರಶಂಸಾಪತ್ರಗಳು

ಹೋಮ್ ಲೋನ್ ಬಡ್ಡಿ ದರಗಳು - FAQ ಗಳು

ಹೋಮ್ ಫೈನಾನ್ಸ್ ಬಡ್ಡಿ ದರವು ಅಸಲು ಮೊತ್ತವನ್ನು ಬಳಸಲು ಸಾಲಗಾರರಿಗೆ ಹೋಮ್ ಲೋನ್ ಒದಗಿಸುವವರು ಅಸಲಿನ ಮೇಲೆ ವಿಧಿಸುವ ಮೊತ್ತವಾಗಿದೆ. ನಿಮ್ಮ ಹೌಸಿಂಗ್ ಲೋನ್ ಬಡ್ಡಿ ದರವು ನಿಮ್ಮ ಹೋಮ್ ಲೋನ್ ಮೇಲೆ ನೀವು ಮಾಸಿಕ ಪಾವತಿಸಬೇಕಾದ EMI ಅನ್ನು ನಿರ್ಧರಿಸುತ್ತದೆ.

ಎಚ್ ಡಿ ಎಫ್ ಸಿ ಬ್ಯಾಂಕ್ ಪ್ರಸ್ತುತ ವರ್ಷಕ್ಕೆ 8.75*% ರಿಂದ ಆರಂಭವಾಗುವ ಹೋಮ್ ಲೋನ್ ಬಡ್ಡಿ ದರಗಳನ್ನು ನೀಡುತ್ತಿದೆ. ಗ್ರಾಹಕರು ಈ ಹೋಮ್ ಲೋನ್ ಬಡ್ಡಿ ದರಗಳನ್ನು ದೀರ್ಘ ಮತ್ತು 30 ವರ್ಷಗಳವರೆಗಿನ ಲೋನ್ ಅವಧಿ, ಎಂಡ್ ಟು ಎಂಡ್ ಡಿಜಿಟಲ್ ಪರಿಹಾರಗಳು, ಕಸ್ಟಮೈಸ್ ಮಾಡಿದ ಮರುಪಾವತಿ ಆಯ್ಕೆಗಳು ಮತ್ತು ಇನ್ನೂ ಹೆಚ್ಚಿನ ಪ್ರಯೋಜನಗಳೊಂದಿಗೆ ಪಡೆಯಬಹುದು! ನಿಮ್ಮ EMI ಅನ್ನು ಲೆಕ್ಕ ಹಾಕಲು https://www.hdfc.com/home-loan-emi-calculator ಗೆ, ಹೋಮ್ ಲೋನಿಗೆ ಈಗಲೇ ಅಪ್ಲೈ ಮಾಡಲು https://www.hdfc.com/call-for-new-home-loan ಭೇಟಿ ನೀಡಿ

ನಿಮ್ಮ ಹೋಮ್ ಲೋನ್ ಬಡ್ಡಿ ದರವನ್ನು ಕಡಿಮೆ ಮಾಡಲು ಅನೇಕ ಮಾರ್ಗಗಳಿವೆ. ಕೆಲವೊಂದು
 

ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಹೆಚ್ಚಿಸಿ: ಲೋನ್ ಅಪ್ಲಿಕೇಶನ್‌ನೊಂದಿಗೆ ಬ್ಯಾಂಕಿಗೆ ಹೋಗುವ ಮೊದಲು, ಉತ್ತಮ ದರದ ಆಫರ್‌ಗಳಿಗಾಗಿ ನಿಮ್ಮ ಕ್ರೆಡಿಟ್ ಸ್ಕೋರನ್ನು ಸುಧಾರಿಸಿ. ನಿಯಮಿತವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸಿ ಮತ್ತು ರಿಫೈನ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ. 

 

ಕಡಿಮೆ ಲೋನ್ ಅವಧಿಯನ್ನು ಆಯ್ಕೆಮಾಡಿ: ಕಡಿಮೆ ಅವಧಿಯ ಲೋನ್‌ಗಳು ಬಡ್ಡಿಯನ್ನು ಒಳಗೊಂಡಂತೆ ಒಟ್ಟು ನಗದು ಹೊರಹರಿವನ್ನು ಕಡಿಮೆ ಮಾಡುತ್ತವೆ.

 

ವೇರಿಯಬಲ್ ಬಡ್ಡಿ ದರಗಳನ್ನು ಪರಿಗಣಿಸಿ: ಈ ದರಗಳು ಮಾರುಕಟ್ಟೆ ಬದಲಾವಣೆಗಳ ಪ್ರಕಾರ ಬದಲಾಗುತ್ತವೆ ಮತ್ತು ಕೆಲವೊಮ್ಮೆ ಫಿಕ್ಸೆಡ್ ದರಗಳಿಗಿಂತ ಉತ್ತಮ ಡೀಲ್ ಅನ್ನು ನೀಡಬಹುದು.

 

ನಿಮ್ಮ ಬ್ಯಾಂಕಿನೊಂದಿಗೆ ವೈಯಕ್ತಿಕವಾಗಿ ತೊಡಗಿಸಿಕೊಳ್ಳಿ: ವಿಶೇಷವಾಗಿ ನೀವು ನಿಷ್ಠಾವಂತ ಗ್ರಾಹಕರಾಗಿದ್ದರೆ, ನಿಮ್ಮ ಬ್ಯಾಂಕ್ ಮ್ಯಾನೇಜರ್ ಅಥವಾ ಬ್ಯಾಂಕಿನ ಯಾವುದೇ ಬ್ಯಾಂಕ್ ಅಧಿಕಾರಿಯೊಂದಿಗೆ ಉತ್ತಮ ಸಂಭಾಷಣೆಯು ಕೆಲವೊಮ್ಮೆ ಕಡಿಮೆ ದರಗಳಿಗೆ ಕಾರಣವಾಗಬಹುದು.
 

ದೊಡ್ಡ ಆರಂಭಿಕ ಪಾವತಿ ಮಾಡಿ: ದೊಡ್ಡ ಡೌನ್ ಪೇಮೆಂಟ್ ನಿಮ್ಮ ಲೋನ್‌ನ ಅಸಲನ್ನು ಕಡಿಮೆ ಮಾಡಬಹುದು, ಇದು ಕಡಿಮೆ ನಗದು ಹೊರಹರಿವಿಗೆ ಕಾರಣವಾಗುತ್ತದೆ.

ನಿಮ್ಮ ಹೋಮ್ ಲೋನ್ EMI ಅಥವಾ ಮಾಸಿಕ ಮರುಪಾವತಿಯನ್ನು ಮೂರು ಪ್ರಮುಖ ಅಂಶಗಳಿಂದ ನಿರ್ಧರಿಸಲಾಗುತ್ತದೆ: ನೀವು ಪಡೆಯುವ ಒಟ್ಟು ಲೋನ್ ಮೊತ್ತ, ಬಡ್ಡಿ ದರ ಮತ್ತು ನೀವು ಲೋನನ್ನು ಎಷ್ಟು ಸಮಯದವರೆಗೆ ಮರುಪಾವತಿಸಲು ಆಯ್ಕೆ ಮಾಡುತ್ತೀರಿ (ಕಾಲಾವಧಿ). ಸಂಕ್ಷಿಪ್ತವಾಗಿ:

 

ಲೋನ್ ಮೊತ್ತ: ನೀವು ಹೆಚ್ಚು ಲೋನ್ ಪಡೆದರೆ, ನಿಮ್ಮ EMI ಹೆಚ್ಚಾಗುತ್ತದೆ.

ಬಡ್ಡಿ ದರ: ಹೆಚ್ಚಿನ ಬಡ್ಡಿ ದರ ಎಂದರೆ ಹೆಚ್ಚಿನ EMI.

ಅವಧಿ: ಹೆಚ್ಚಿನ ವರ್ಷಗಳಲ್ಲಿ ನಿಮ್ಮ ಲೋನನ್ನು ವಿಸ್ತರಿಸುವುದರಿಂದ ನಿಮ್ಮ ಮಾಸಿಕ ಪಾವತಿಯನ್ನು ಕಡಿಮೆ ಮಾಡಬಹುದು, ಆದರೆ ನೀವು ಕಾಲಕಾಲಕ್ಕೆ ಒಟ್ಟು ಬಡ್ಡಿಯಲ್ಲಿ ಹೆಚ್ಚು ಪಾವತಿಸಬಹುದು. 

 

ನಿಮ್ಮ ಮಾಸಿಕ ಮರುಪಾವತಿಯನ್ನು ಸುಲಭವಾಗಿ ನಿರ್ಧರಿಸಲು ನಿಮಗೆ ಸಹಾಯ ಮಾಡಲು ಅನೇಕ ಬ್ಯಾಂಕುಗಳು EMI ಕ್ಯಾಲ್ಕುಲೇಟರ್‌ಗಳು ಎಂದು ಕರೆಯಲ್ಪಡುವ ಆನ್ಲೈನ್ ಸಾಧನಗಳನ್ನು ಒದಗಿಸುತ್ತವೆ. ಅಂದಾಜು EMI ಪಡೆಯಲು ನಿಮ್ಮ ಲೋನ್ ವಿವರಗಳನ್ನು ನಮೂದಿಸಿ.

ಪ್ರಸ್ತುತ ಎಚ್ ಡಿ ಎಫ್ ಸಿ ಬ್ಯಾಂಕ್ ನೀಡುವ ಅತಿ ಕಡಿಮೆ ಹೋಮ್ ಲೋನ್ ಬಡ್ಡಿ ದರ ವರ್ಷಕ್ಕೆ 8.75*%

ನೀವು ಕುಟುಂಬದ ಸದಸ್ಯ ಅಥವಾ ಸಂಗಾತಿಯಂತಹ ಸಹ-ಅರ್ಜಿದಾರರನ್ನು ಸೇರಿಸಿದಾಗ, ಸಾಲದಾತರು ಇಬ್ಬರು ಅರ್ಜಿದಾರರ ಸಂಯೋಜಿತ ಆದಾಯ ಮತ್ತು ಕ್ರೆಡಿಟ್ ಅರ್ಹತೆಯನ್ನು ಪರಿಗಣಿಸುತ್ತಾರೆ. ಈ ಜಂಟಿ ಮೌಲ್ಯಮಾಪನವು ಸಾಲದಾತರಿಗೆ ಹೆಚ್ಚಿನ ಅರ್ಹತೆ ಮತ್ತು ಹೆಚ್ಚು ಅನುಕೂಲಕರ ರಿಸ್ಕ್ ಪ್ರೊಫೈಲ್‌ಗೆ ಕಾರಣವಾಗಬಹುದು.

ಖಂಡಿತ. ನಿಮ್ಮ ಹೋಮ್ ಲೋನ್ ಬಡ್ಡಿ ದರವನ್ನು ನಿರ್ಧರಿಸುವಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಾಲದಾತರು ನಿಮ್ಮ ಕ್ರೆಡಿಟ್ ಅರ್ಹತೆ ಮತ್ತು ನಿಮಗೆ ಸಾಲ ನೀಡುವುದಕ್ಕೆ ಸಂಬಂಧಿಸಿದ ಅಪಾಯವನ್ನು ನಿರ್ಣಯಿಸಲು ನಿಮ್ಮ ಕ್ರೆಡಿಟ್ ಸ್ಕೋರ್ ಬಳಸುತ್ತಾರೆ. ಸಾಮಾನ್ಯವಾಗಿ ಹೆಚ್ಚಿನ ಕ್ರೆಡಿಟ್ ಸ್ಕೋರ್ ಸಾಲದಾತರಿಗೆ ಕಡಿಮೆ ಅಪಾಯಕ್ಕೆ ಕಾರಣವೆಂದು ಪರಿಗಣಿಸಲಾಗುತ್ತದೆ, ಇದು ಹೋಮ್ ಲೋನ್ ಮೇಲೆ ಹೆಚ್ಚು ಅನುಕೂಲಕರ ಬಡ್ಡಿ ದರವನ್ನು ನೀಡಬಹುದು. ಇದಕ್ಕೆ ವಿರುದ್ಧವಾಗಿ, ಕಡಿಮೆ ಕ್ರೆಡಿಟ್ ಸ್ಕೋರ್ ಹೆಚ್ಚಿನ ಬಡ್ಡಿ ದರಕ್ಕೆ ಕಾರಣವಾಗಬಹುದು ಅಥವಾ ಕೆಲವು ಸಂದರ್ಭಗಳಲ್ಲಿ, ಲೋನನ್ನು ಪಡೆಯುವಲ್ಲಿ ತೊಂದರೆಯಾಗಬಹುದು.

ಹೋಮ್ ಲೋನಿಗೆ ನೀವು ಪಡೆಯಬಹುದಾದ ಗರಿಷ್ಠ ಮೊತ್ತವು ನಿಮ್ಮ ಆದಾಯ, ಕ್ರೆಡಿಟ್ ಅರ್ಹತೆ ಮತ್ತು ಸಾಲ ನೀಡುವ ಸಂಸ್ಥೆಯ ಪಾಲಿಸಿಗಳನ್ನು ಒಳಗೊಂಡಂತೆ ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ, ಸಾಲದಾತರು ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಪರಿಗಣಿಸುತ್ತಾರೆ, ಇದನ್ನು ನಿಮ್ಮ ಆದಾಯ, ಅಸ್ತಿತ್ವದಲ್ಲಿರುವ ಹಣಕಾಸಿನ ಬದ್ಧತೆಗಳು ಮತ್ತು ಕ್ರೆಡಿಟ್ ಇತಿಹಾಸ ಮತ್ತು ನಿಯಂತ್ರಕ ಮಾರ್ಗಸೂಚಿಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಹಣಕಾಸು ಒದಗಿಸಬಹುದಾದ ಆಸ್ತಿಯ ಮೌಲ್ಯದ ಶೇಕಡಾವಾರನ್ನು ಪ್ರತಿನಿಧಿಸುವ ಲೋನ್-ಟು-ವ್ಯಾಲ್ಯೂ (LTV) ಅನುಪಾತವು ಕೂಡ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಸಾಲದಾತರು ಸಾಮಾನ್ಯವಾಗಿ ಹೋಮ್ ಲೋನ್ ಆಗಿ ಆಸ್ತಿಯ ಮೌಲ್ಯದ 80-90% ವರೆಗೆ ಆಫರ್ ಮಾಡುತ್ತಾರೆ. 

 

ನಿಮ್ಮ ಅನನ್ಯ ಹಣಕಾಸಿನ ಪರಿಸ್ಥಿತಿಯ ಆಧಾರದ ಮೇಲೆ ನೀವು ಅರ್ಹರಾಗಬಹುದಾದ ಗರಿಷ್ಠ ಲೋನ್ ಮೊತ್ತವನ್ನು ನಿರ್ಧರಿಸುವ ನಿರ್ದಿಷ್ಟ ಮಾನದಂಡಗಳು ಮತ್ತು ಅಂಶಗಳನ್ನು ಅರ್ಥಮಾಡಿಕೊಳ್ಳಲು ನಿಮ್ಮ ಆಯ್ಕೆಮಾಡಿದ ಸಾಲದಾತರೊಂದಿಗೆ ಪರಿಶೀಲಿಸುವುದು ಸೂಕ್ತವಾಗಿದೆ.

ನಮ್ಮ ಲೋನ್ ಎಕ್ಸ್‌ಪರ್ಟ್‌ಗಳಿಂದ ಕರೆ ಪಡೆಯಲು ದಯವಿಟ್ಟು ನಿಮ್ಮ ವಿವರಗಳನ್ನು ಶೇರ್ ಮಾಡಿ!

Thank you!

ಧನ್ಯವಾದಗಳು!

ನಮ್ಮ ಲೋನ್ ಪರಿಣಿತರು ನಿಮಗೆ ಆದಷ್ಟು ಬೇಗ ಕರೆ ಮಾಡುತ್ತಾರೆ!

ಸರಿ

ಏನೋ ತಪ್ಪಾಗಿದೆ..!

ದಯವಿಟ್ಟು ಮತ್ತೆ ಪ್ರಯತ್ನಿಸಿ

ಸರಿ

ಹೊಸ ಹೋಮ್ ಲೋನಿಗಾಗಿ ಹುಡುಕುತ್ತಿದ್ದೀರಾ?

ಈ ನಂಬರ್‌ಗೆ ಒಂದು ಮಿಸ್ ಕಾಲ್ ಕೊಡಿ

Phone icon

+91-9289200017

ವೇಗವಾದದ್ದು

ಲೋನ್ ಅವಧಿ

15 ವರ್ಷಗಳು

ಬಡ್ಡಿ ದರ

8.50ವಾರ್ಷಿಕ %.

ಜನಪ್ರಿಯವಾದದ್ದು

ಲೋನ್ ಅವಧಿ

20 ವರ್ಷಗಳು

ಬಡ್ಡಿ ದರ

8.50ವಾರ್ಷಿಕ %.

ಸುಲಭವಾದದ್ದು

ಲೋನ್ ಅವಧಿ

30 ವರ್ಷಗಳು

ಬಡ್ಡಿ ದರ

8.50ವಾರ್ಷಿಕ %.

800 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರಿಗೆ*

* ಈ ದರಗಳು ಇಂದಿನ ಪ್ರಕಾರವಾಗಿದೆ,

ನಿಮಗೆ ಯಾವುದು ತಕ್ಕುದು ಎಂಬುದರ ಬಗ್ಗೆ ಗೊಂದಲವೇ??

Banner
"HDFC ಹೌಸಿಂಗ್ ಫೈನಾನ್ಸ್‌ನಲ್ಲಿ ತ್ವರಿತ ಸೇವೆಗಾಗಿ ಮತ್ತು ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದ"
- ಅವಿನಾಶಕುಮಾರ್ ರಾಜಪುರೋಹಿತ್,ಮುಂಬೈ

ನಿಮ್ಮ ವಿವರಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದ

198341
198341
198341
198341
ಬಾಕಿ ಮನ್ನಾ ಶೆಡ್ಯೂಲ್ ನೋಡಿ

EMI ವಿಂಗಡನೆ ಚಾರ್ಟ್