ಹೋಮ್ ಲೋನ್ EMI ಕ್ಯಾಲ್ಕುಲೇಟರ್

₹1 ಲಕ್ಷ ₹10 ಕೋಟಿ
1 30
%
0.5 15
198341
ವಿವರಗಳನ್ನು ನೋಡಿ
198341
198341
198341

ಈ ಕ್ಯಾಲ್ಕುಲೇಟರ್‌ಗಳನ್ನು ಸಾಮಾನ್ಯ ಸ್ವ-ಸಹಾಯ ಯೋಜನೆ ಟೂಲ್‌ಗಳಾಗಿ ಮಾತ್ರ ಒದಗಿಸಲಾಗುತ್ತದೆ. ಫಲಿತಾಂಶಗಳು ನೀವು ಒದಗಿಸುವ ಊಹೆಗಳನ್ನು ಒಳಗೊಂಡಂತೆ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. ಅವುಗಳ ನಿಖರತೆ, ಅಥವಾ ನಿಮ್ಮ ಸನ್ನಿವೇಶಗಳಿಗೆ ಅನ್ವಯವಾಗುವುದನ್ನು ನಾವು ಖಾತರಿಪಡಿಸುವುದಿಲ್ಲ.
NRI ಗಳು ನಿವ್ವಳ ಆದಾಯವನ್ನು ನಮೂದಿಸಬೇಕು.

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ಎಚ್ ಡಿ ಎಫ್ ಸಿ ಬ್ಯಾಂಕ್‌ನ ಹೋಮ್ ಲೋನ್ ಕ್ಯಾಲ್ಕುಲೇಟರ್ ನಿಮ್ಮ ಹೋಮ್ ಲೋನ್ EMI ಅನ್ನು ಸುಲಭವಾಗಿ ಲೆಕ್ಕಾಚಾರ ಮಾಡಲು ಸಹಾಯ ಮಾಡುತ್ತದೆ. ಹೋಮ್ ಲೋನ್‌ಗಾಗಿ ಎಚ್ ಡಿ ಎಫ್ ಸಿ ಬ್ಯಾಂಕ್‌ನ EMI ಕ್ಯಾಲ್ಕುಲೇಟರ್ ಹೊಸ ಮನೆಯನ್ನು ಖರೀದಿಸುವ ಕುರಿತು ಸಮರ್ಪಕ ನಿರ್ಧಾರವನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. EMI ಕ್ಯಾಲ್ಕುಲೇಟರ್ ನಿಮ್ಮ ಹೋಮ್ ಲೋನ್ ಸೇವೆಗಾಗಿ ನಿಮ್ಮ ನಗದು ಹರಿವನ್ನು ಯೋಜಿಸಲು ಉಪಯುಕ್ತವಾಗಿದೆ. ಎಚ್ ಡಿ ಎಫ್ ಸಿ ಬ್ಯಾಂಕ್ ಪ್ರತಿ ಲಕ್ಷಕ್ಕೆ ₹787 ರಿಂದ ಪ್ರಾರಂಭವಾಗುವ EMI ಗಳೊಂದಿಗೆ ಮತ್ತು ಬಡ್ಡಿದರಗಳು ವಾರ್ಷಿಕ 8.75%* ಜೊತೆಗೆ ಹೊಂದಿಕೊಳ್ಳುವ ಮರುಪಾವತಿ ಆಯ್ಕೆಗಳು ಮತ್ತು ಟಾಪ್-ಅಪ್ ಸಾಲದಂತಹ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಹೋಮ್ ಲೋನ್‌ಗಳನ್ನು ನೀಡುತ್ತದೆ. ಕಡಿಮೆ-ಬಡ್ಡಿ ದರ ಮತ್ತು ದೀರ್ಘ ಮರುಪಾವತಿ ಅವಧಿಯೊಂದಿಗೆ, ಎಚ್ ಡಿ ಎಫ್ ಸಿ ಬ್ಯಾಂಕ್ ನಿಮಗೆ ಆರಾಮದಾಯಕ ಹೋಮ್ ಲೋನ್ EMI ಅನ್ನು ಖಚಿತಪಡಿಸುತ್ತದೆ. ನಮ್ಮ ಸಮಂಜಸವಾದ EMI ಗಳೊಂದಿಗೆ, ಎಚ್ ಡಿ ಎಫ್ ಸಿ ಬ್ಯಾಂಕ್ ಹೋಮ್ ಲೋನ್ ಅನ್ನು ನಿಮ್ಮ ಜೇಬಿಗೆ ಹಗುರವಾಗಿರುತ್ತದೆ. ನಮ್ಮ ಸುಲಭವಾಗಿ ಅರ್ಥಮಾಡಿಕೊಳ್ಳಬಲ್ಲ ಕ್ಯಾಲ್ಕುಲೇಟರ್ ಮೂಲಕ ನಿಮ್ಮ ಹೋಮ್ ಲೋನ್‌ಗೆ ನೀವು ಪಾವತಿಸಬೇಕಾದ EMI ಅನ್ನು ಲೆಕ್ಕಾಚಾರ ಮಾಡಿ ಹೋಮ್ ಲೋನ್ EMI ಕ್ಯಾಲ್ಕುಲೇಟರ್.

ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಎಂದರೇನು?

ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಲೋನ್ ಕಂತುಗಳನ್ನು ಲೆಕ್ಕಾಚಾರ ಹಾಕಲು ಸಹಾಯ ಮಾಡುತ್ತದೆ ಅಂದರೆ ನಿಮ್ಮ ಹೋಮ್ ಲೋನ್ ಮೇಲಿನ. ಕ್ಯಾಲ್ಕುಲೇಟರ್ ಬಳಸುವುದು ಸುಲಭ ಮತ್ತು ಮನೆ ಖರೀದಿದಾರರಿಗೆ ಹಣಕಾಸಿನ ಯೋಜನೆಯ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ.

ಹೋಮ್ ಲೋನ್ EMI ಎಂದರೇನು?

EMI ಎಂದರೆ ಸಮನಾದ ಮಾಸಿಕ ಕಂತು ಎಂದಾಗಿದೆ. ಇದರಲ್ಲಿ ಪ್ರಮುಖ ಮೊತ್ತದ ಮರುಪಾವತಿ ಮತ್ತು ನಿಮ್ಮ ಹೋಮ್ ಲೋನ್ ಮೇಲಿನ ಬಡ್ಡಿಯ ಪಾವತಿಯನ್ನು ಒಳಗೊಂಡಿದೆ. ದೀರ್ಘಾವಧಿಯ ಸಾಲದ ಅವಧಿಯು (ಗರಿಷ್ಠ ಅವಧಿಯ 30 ವರ್ಷಗಳವರೆಗೆ) EMI ಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ವಿವರಣೆ: ಲೋನ್ ಮೇಲಿನ EMI ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

EMI ಲೆಕ್ಕಾಚಾರಕ್ಕಾಗಿ ಫಾರ್ಮುಲಾ -

P x R x (1+R)^N / [(1+R)^N-1] ಇಲ್ಲಿ-

ಪಿ = ಅಸಲು ಲೋನ್ ಮೊತ್ತ

N = ತಿಂಗಳುಗಳಲ್ಲಿ ಲೋನ್ ಅವಧಿ

R = ಮಾಸಿಕ ಬಡ್ಡಿ ದರ

ನಿಮ್ಮ ಲೋನ್ ಮೇಲಿನ ಬಡ್ಡಿ ದರ (R) ಪ್ರತಿ ತಿಂಗಳು ಲೆಕ್ಕ ಹಾಕಲಾಗುತ್ತದೆ.

R = ವಾರ್ಷಿಕ ಬಡ್ಡಿ ದರ/12/100

ಬಡ್ಡಿ ದರವು ವರ್ಷಕ್ಕೆ 7.2% ಆಗಿದ್ದರೆ r = 7.2/12/100 = 0.006

ಉದಾಹರಣೆಗೆ, ಒಬ್ಬ ವ್ಯಕ್ತಿಯು 120 ತಿಂಗಳ (10 ವರ್ಷಗಳು) ಅವಧಿಗೆ 7.2% ವಾರ್ಷಿಕ ಬಡ್ಡಿ ದರದಲ್ಲಿ ₹10,00,000 ಲೋನನ್ನು ಪಡೆದರೆ, ಅವರ EMI ಅನ್ನು ಈ ಕೆಳಗಿನಂತೆ ಲೆಕ್ಕ ಹಾಕಲಾಗುತ್ತದೆ:

EMI= ₹10,00,000 * 0.006 * (1 + 0.006)120 / ((1 + 0.006)120 - 1) = ₹11,714.

ಪಾವತಿಸಬೇಕಾದ ಒಟ್ಟು ಮೊತ್ತವು ₹11,714 * 120 = ₹14,05,703 ಆಗಿರುತ್ತದೆ. ಅಸಲು ಲೋನ್ ಮೊತ್ತ ₹10,00,000 ಮತ್ತು ಬಡ್ಡಿ ಮೊತ್ತವು ₹4,05,703 ಆಗಿರುತ್ತದೆ

ಫಾರ್ಮುಲಾ ಬಳಸಿ ಮಾನ್ಯುಯಲ್ ಆಗಿ EMI ಅನ್ನು ಲೆಕ್ಕ ಹಾಕಲು ಕಷ್ಟವಾಗಬಹುದು.

ಎಚ್ ಡಿ ಎಫ್ ಸಿ ಬ್ಯಾಂಕಿನ EMI ಕ್ಯಾಲ್ಕುಲೇಟರ್ ನಿಮ್ಮ ಲೋನ್ EMI ಅನ್ನು ಸುಲಭವಾಗಿ ಲೆಕ್ಕ ಹಾಕಲು ಸಹಾಯ ಮಾಡುತ್ತದೆ.

ಮನೆ ಖರೀದಿ ಯೋಜನೆಗೆ EMI ಲೆಕ್ಕಾಚಾರ ಹೇಗೆ ಸಹಾಯ ಮಾಡುತ್ತದೆ?

ಎಚ್ ಡಿ ಎಫ್ ಸಿ ಬ್ಯಾಂಕಿನ ಹೋಮ್ ಲೋನ್ EMI ಕ್ಯಾಲ್ಕುಲೇಟರ್ EMI ಗಳಿಗೆ ಪಾವತಿಸಬೇಕಾದ ಮೊತ್ತದ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನು ನೀಡುತ್ತದೆ ಮತ್ತು ಪ್ರತಿ ತಿಂಗಳು ಹೌಸಿಂಗ್ ಲೋನ್ ಕಡೆಗೆ ಹೊರಹರಿವಿನ ಬಗ್ಗೆ ಸಮರ್ಪಕ ನಿರ್ಧಾರವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಇದು ಪಡೆಯಬಹುದಾದ ಲೋನ್ ಮೊತ್ತವನ್ನು ಅಂದಾಜು ಮಾಡಲು ಸಹಾಯ ಮಾಡುತ್ತದೆ ಮತ್ತು ಸ್ವಂತ ಕೊಡುಗೆ ನೀಡಬೇಕಾದ ಅವಶ್ಯಕತೆಗಳು ಮತ್ತು ಆಸ್ತಿಯ ವೆಚ್ಚವನ್ನು ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಹೋಮ್ ಲೋನ್ ಅರ್ಹತೆಯನ್ನು ಲೆಕ್ಕ ಹಾಕಲು ಮತ್ತು ನಿಮ್ಮ ಮನೆ ಖರೀದಿಯ ಪ್ರಯಾಣವನ್ನು ಉತ್ತಮವಾಗಿ ಯೋಜಿಸಲು EMI ತಿಳಿದುಕೊಳ್ಳುವುದು ಮುಖ್ಯವಾಗಿದೆ.

ಎಚ್ ಡಿ ಎಫ್ ಸಿ ಬ್ಯಾಂಕ್ ಹೋಮ್ ಲೋನ್‌ಗಳ ಪ್ರಮುಖ ಫೀಚರ್‌ಗಳು ಮತ್ತು ಪ್ರಯೋಜನಗಳು ಯಾವುವು?

  • ಅನುಮೋದಿತ ಯೋಜನೆಗಳಲ್ಲಿ ಖಾಸಗಿ ಡೆವೆಲಪರ್ ಅವರಿಂದ ಫ್ಲಾಟ್, ಸಾಲು ಮನೆ, ಬಂಗಲೆ ಖರೀದಿಸಲು ಹೋಮ್ ಲೋನ್
  • ಅಭಿವೃದ್ಧಿ ಪ್ರಾಧಿಕಾರ DDA, MHADA ಇತ್ಯಾದಿಗಳಿಂದ ಆಸ್ತಿ ಖರೀದಿಸಲು ಹೋಮ್ ಲೋನ್
  • ಅಸ್ತಿತ್ವದಲ್ಲಿರುವ ಸಹಕಾರಿ ವಸತಿ ಸೊಸೈಟಿ ಅಲ್ಲಿ ಅಥವಾ ಅಪಾರ್ಟ್ಮೆಂಟ್ ಮಾಲೀಕರ ಸಂಘ ಅಥವಾ ಅಭಿವೃದ್ಧಿ ಪ್ರಾಧಿಕಾರದ ವಸತಿ ಅಥವಾ ಖಾಸಗಿ ನಿರ್ಮಾಣದ ಮನೆ ಆಸ್ತಿಯನ್ನು ಖರೀದಿಸಲು ಲೋನ್
  • ಒಂದು ಮುಕ್ತವಾದ / ಲೀಸ್ ಪ್ಲಾಟ್ ಅಥವಾ ಅಭಿವೃದ್ಧಿ ಪ್ರಾಧಿಕಾರ ನೀಡಲಾದ ಪ್ಲಾಟ್ ಅಲ್ಲಿ ನಿರ್ಮಾಣಕ್ಕಾಗಿ ಲೋನ್
  • ಮನೆ ಖರೀದಿಯಲ್ಲಿ ಸರಿಯಾದ ನಿರ್ಧಾರವನ್ನು ಮಾಡಲು ನಿಮಗೆ ಸಹಾಯವಾಗಿ ಪರಿಣಿತ ಕಾನೂನು ಮತ್ತು ತಾಂತ್ರಿಕ ಸಲಹೆಯನ್ನು ಕೊಡಮಾಡುತ್ತೇವೆ
  • ಭಾರತದಲ್ಲಿ ಎಲ್ಲಿಯಾದರೂ ಹೋಮ್ ಲೋನ್ ಪಡೆಯಲು ಮತ್ತು ಸರ್ವಿಸ್ ನೀಡಲು ಇಂಟಿಗ್ರೇಟೆಡ್ ಬ್ರಾಂಚ್ ನೆಟ್ವರ್ಕ್
  • ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದವರಿಗೆ ಹೋಮ್ ಲೋನಿಗಾಗಿ AGIF ಯೊಂದಿಗೆ ವಿಶೇಷ ವ್ಯವಸ್ಥೆ.
     

ಎಲ್ಲಾ ವಯೋ ಗುಂಪುಗಳ ಮತ್ತು ಉದ್ಯೋಗದ ಕೆಟಗರಿಗಳ ಗ್ರಾಹಕರಿಗೆ ನಮ್ಮ ಹೋಮ್ ಲೋನ್‌ಗಳು ಹೊಂದುತ್ತವೆ. ನಾವು 30 ವರ್ಷಗಳವರೆಗಿನ ದೀರ್ಘಕಾಲದ ಅವಧಿಯ ಲೋನ್‌ಗಳನ್ನು ಒದಗಿಸುತ್ತೇವೆ, ವಿಶೇಷವಾಗಿ ತಮ್ಮ ಬದುಕಿನ ಆರಂಭಿಕ ಹಂತದಲ್ಲಿ ಮನೆ ಮಾಲೀಕರಾಗಲು ಬಯಸುವ ಯುವ ಗ್ರಾಹಕರಿಗೆ ಹೊಂದಾಣಿಕೆ ದರದ ಆಯ್ಕೆಯಡಿ ದೀರ್ಘಾವಧಿ ಮರುಪಾವತಿ ಆಯ್ಕೆಯನ್ನು ಒದಗಿಸುತ್ತೇವೆ.

4 ದಶಕಗಳಿಂದ ಹೋಮ್ ಫೈನಾನ್ಸನ್ನು ಒದಗಿಸುವ ಅನುಭವದ ಜತೆಗೆ, ಗ್ರಾಹಕರ ವಿವಿಧ ಅಗತ್ಯತೆಗಳನ್ನು ಅರ್ಥ ಮಾಡಿಕೊಂಡಿದ್ದೇವೆ ಮತ್ತು ಅವರ ಮನೆ ಕೊಳ್ಳುವ ಕನಸನ್ನು ನನಸಾಗಿಸಿದ್ದೇವೆ .

ಎಚ್ ಡಿ ಎಫ್ ಸಿ ಬ್ಯಾಂಕಿನ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಬಳಸುವುದು ಹೇಗೆ?

ನಿಮ್ಮ EMI ತಿಳಿಯಲು ಕೆಳಗಿನವುಗಳನ್ನು ತುಂಬುವುದು ಅಗತ್ಯ:

  • ಲೋನಿನ ಮೊತ್ತ: ನೀವು ಉಪಯೋಗಿಸಲು ಬಯಸುವ ಅಪೇಕ್ಷಿತ ಲೋನಿನ ಮೊತ್ತವನ್ನು ನಮೂದಿಸಿ
  • ಲೋನಿನ ಅವಧಿ (ವರ್ಷಗಳಲ್ಲಿ): ನೀವು ಹೌಸಿಂಗ್ ಲೋನನ್ನು ಪಡೆಯಲು ಬಯಸುವ ಅಪೇಕ್ಷಿತ ಲೋನಿನ ಅವಧಿಯನ್ನು ನಮೂದಿಸಿ. ಅರ್ಹತೆ ಹೆಚ್ಚಿಸುವಲ್ಲಿ ದೀರ್ಘಾವಧಿಯ ಅಧಿಕಾರಾವಧಿಯು ನೆರವಾಗುತ್ತದೆ
  • ಬಡ್ಡಿ ದರ (% ವರ್ಷಕ್ಕೆ): ಬಡ್ಡಿ ದರ ನಮೂದಿಸಿ.
     

ಚಾಲ್ತಿಯಲ್ಲಿರುವ ಹೋಮ್ ಲೋನ್ ಬಡ್ಡಿ ದರಗಳನ್ನು ತಿಳಿದುಕೊಳ್ಳಲು 'ಇಲ್ಲಿ ಕ್ಲಿಕ್ ಮಾಡಿ'

ಹೋಮ್ ಲೋನ್ ಅಮೊರ್ಟೈಸೇಶನ್ ಶೆಡ್ಯೂಲ್ ಎಂದರೇನು?

ಲೋನ್ ಅಮೊರ್ಟೈಸೇಶನ್ ಎಂಬುದು ಲೋನ್ ಅವಧಿಯಲ್ಲಿ ನಿಯಮಿತ ಪಾವತಿಗಳನ್ನು ಮಾಡುವ ಮೂಲಕ ಲೋನನ್ನು ಕಿರಿದು ಮಾಡುವ ಪ್ರಕ್ರಿಯೆಯಾಗಿದೆ. ಹೋಮ್ ಲೋನ್ ಅಮೊರ್ಟೈಸೇಶನ್ ಶೆಡ್ಯೂಲ್ ಎಂಬುದು ಮರುಪಾವತಿ ಮೊತ್ತ, ಅಸಲು ಮತ್ತು ಬಡ್ಡಿ ಘಟಕದ ವಿವರಗಳನ್ನು ನೀಡುವ ಒಂದು ಟೇಬಲ್ ಆಗಿದೆ.

ಎಚ್ ಡಿ ಎಫ್ ಸಿ ಬ್ಯಾಂಕಿನ EMI ಕ್ಯಾಲ್ಕುಲೇಟರ್‌ಗಳು ಲೋನ್ ಅವಧಿ ಮತ್ತು ಬಡ್ಡಿ ದರಗಳ ಆಧಾರದ ಮೇಲೆ ಬಾಕಿ ಬಡ್ಡಿಗೆ ಅಸಲು ಮೊತ್ತದ ಅನುಪಾತದ ಬಗ್ಗೆ ನ್ಯಾಯೋಚಿತ ತಿಳುವಳಿಕೆಯನ್ನು ನೀಡುತ್ತವೆ. EMI ಕ್ಯಾಲ್ಕುಲೇಟರ್ ಮರುಪಾವತಿ ಶೆಡ್ಯೂಲನ್ನು ನೀಡುವ ಒಂದು ಅಮೊರ್ಟೈಸೇಶನ್ ಟೇಬಲ್ ಅನ್ನು ಸಹ ಒದಗಿಸುತ್ತದೆ. ಎಚ್ ಡಿ ಎಫ್ ಸಿ ಬ್ಯಾಂಕಿನ ಹೋಮ್ ಲೋನ್ ಕ್ಯಾಲ್ಕುಲೇಟರ್ ಬಡ್ಡಿ ಮತ್ತು ಅಸಲು ಮೊತ್ತದ ಸಂಪೂರ್ಣ ವಿವರಣೆಯನ್ನು ಒದಗಿಸುತ್ತದೆ.

ಎಚ್ ಡಿ ಎಫ್ ಸಿ ಬ್ಯಾಂಕ್ ಹೋಮ್ ಲೋನ್ ಅರ್ಹತೆಯನ್ನು ಹೆಚ್ಚಿಸುವ ವಿವಿಧ ಮರುಪಾವತಿ ಯೋಜನೆಗಳನ್ನು ಒದಗಿಸುತ್ತದೆ:

ವೈವಿಧ್ಯಮಯ ಅಗತ್ಯಗಳಿಗೆ ಸರಿಹೊಂದುವಂತೆ ಹೋಮ್ ಲೋನ್ ಅರ್ಹತೆ ಗರಿಷ್ಠಗೊಳಿಸಲು ಎಚ್ ಡಿ ಎಫ್ ಸಿ ಬ್ಯಾಂಕ್ ವಿವಿಧ ಮರುಪಾವತಿ ಯೋಜನೆಗಳನ್ನು ಒದಗಿಸುತ್ತದೆ.

  • ಮರುಪಾವತಿ ಸೌಲಭ್ಯವನ್ನು ಹೆಚ್ಚಿಸಿಕೊಳ್ಳಿ (SURF)

ನಿಮ್ಮ ಆದಾಯದ ನಿರೀಕ್ಷಿತ ಬೆಳವಣಿಗೆಗೆ ಸಂಬಂಧಪಟ್ಟ ಒಂದು ಆಯ್ಕೆಯನ್ನು SURF ಒದಗಿಸುತ್ತದೆ. ನಿಮ್ಮ ಆರಂಭಿಕ ವರ್ಷಗಳಲ್ಲಿ ನೀವು ಹೆಚ್ಚಿನ ಪ್ರಮಾಣದ ಲೋನನ್ನು ಪಡೆಯಬಹುದು ಮತ್ತು ಕಡಿಮೆ EMI ಗಳನ್ನು ಪಾವತಿಸಬಹುದು. ತರುವಾಯ, ಮರುಪಾವತಿಯನ್ನು ನಿಮ್ಮ ಆದಾಯದಲ್ಲಿ ಹೆಚ್ಚಿದ ಹೆಚ್ಚಳದೊಂದಿಗೆ ಅನುಗುಣವಾಗಿ ಇದರ ವೇಗವನ್ನು ಹೆಚ್ಚಿಸಲಾಗುತ್ತದೆ.

  • ಹೊಂದಿಕೊಳ್ಳುವ ಲೋನ್ ಕಂತು ಯೋಜನೆ (FLIP)

FLIP ಲೋನ್ ಮರುಪಾವತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಕಸ್ಟಮೈಸ್ ಮಾಡಿದ ಪರಿಹಾರವನ್ನು ಒದಗಿಸುತ್ತದೆ, ಇದು ಲೋನಿನ ಅವಧಿಯ ಸಮಯದಲ್ಲಿ ಬದಲಾಗಬಹುದು. ಪ್ರಾರಂಭದ ವರ್ಷಗಳಲ್ಲಿ EMI ಹೆಚ್ಚಿರುತ್ತದೆ ಮತ್ತು ತರುವಾಯ ಆದಾಯಕ್ಕೆ ಅನುಗುಣವಾಗಿ ಕಡಿಮೆಯಾಗುವ ರೀತಿಯಲ್ಲಿ ಲೋನನ್ನು ರಚಿಸಲಾಗಿದೆ.

  • ಕಂತು ಆಧಾರಿತ EMI

ನೀವು ಒಂದುವೇಳೆ ನಿರ್ಮಾಣದ ಹಂತದಲ್ಲಿರುವ ಆಸ್ತಿಯನ್ನು ಖರೀದಿ ಮಾಡಿದರೆ, ನೀವು ಲೋನಿನ ಕಡೆಯ ವಿತರಣೆಯವರೆಗೆ ಲೋನ್ ಮೊತ್ತದ ಮೇಲೆ ಬಡ್ಡಿಯನ್ನು ಮಾತ್ರ ಪಾವತಿಸಬೇಕಾಗುವುದು ಮತ್ತು EMI ಗಳನ್ನು ನಂತರ ಪಾವತಿಸಬೇಕಾಗುತ್ತದೆ. ಒಂದು ವೇಳೆ ನೀವು ಅಸಲು ಪಾವತಿಯನ್ನು ತಕ್ಷಣ ಆರಂಭಿಸಲು ಬಯಸಿದರೆ, ನೀವು ಲೋನನ್ನು ಟ್ರಾಂಚ್ ಮಾಡಲು ಆಯ್ಕೆ ಮಾಡಬಹುದು ಮತ್ತು ವಿತರಣೆಯಾದ ಸಂಚಿತ ಮೊತ್ತಗಳ ಮೇಲೆ EMI ಗಳನ್ನು ಪಾವತಿಸಲು ಆರಂಭಿಸಬಹುದು.

  • ವೇಗದ ಮರುಪಾವತಿ ಯೋಜನೆ

ಈ ಆಯ್ಕೆಯು ನಿಮ್ಮ ಆದಾಯದ ಹೆಚ್ಚಳಕ್ಕೆ ಅನುಗುಣವಾಗಿ ಪ್ರತಿ ವರ್ಷ EMI ಗಳನ್ನು ಹೆಚ್ಚಿಸಲು ನಿಮಗೆ ಅನುಕೂಲವಾಗುವಂತೆ ಮಾಡುತ್ತದೆ, ಅದು ನಿಮ್ಮ ಲೋನನ್ನು ತೀರಾ ವೇಗವಾಗಿ ಮರುಪಾವತಿಸುತ್ತದೆ.

  • ಟೆಲಿಸ್ಕೋಪಿಕ್ ಮರುಪಾವತಿ ಆಯ್ಕೆ

ಈ ಆಯ್ಕೆಯೊಂದಿಗೆ ನೀವು 30 ವರ್ಷಗಳವರೆಗೆ ಮರುಪಾವತಿಯ ಅವಧಿಯನ್ನು ಪಡೆದುಕೊಳ್ಳುತ್ತೀರಿ. ಇದರರ್ಥ ವರ್ಧಿತ ಸಾಲದ ಮೊತ್ತದ ಅರ್ಹತೆ ಮತ್ತು ಸಣ್ಣ EMI ಗಳು.

ನಮ್ಮ ವಿಶೇಷವಾದ EMI ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು ನಿಮ್ಮ ಹೌಸಿಂಗ್ ಲೋನಿನ EMI ಗಳನ್ನು ಈಗಲೇ ಅಂದಾಜು ಮಾಡಿ!

ಕ್ಯಾಲ್ಕುಲೇಟರ್ ಬಳಸಿ EMI ಅಂದಾಜು ಸಿಕ್ಕ ಕೂಡಲೇ, ನೀವು ಎಚ್ ಡಿ ಎಫ್ ಸಿ ಬ್ಯಾಂಕಿನ ಆನ್ಲೈನ್ ಹೋಮ್ ಲೋನ್‌ಗಳೊಂದಿಗೆ ನಿಮ್ಮ ಮನೆಯಲ್ಲೇ ಕುಳಿತು ಆನ್ಲೈನ್‌ನಲ್ಲಿ ಹೋಮ್ ಲೋನ್‌ಗೆ ಅಪ್ಲೈ ಮಾಡಬಹುದು.

ಮುಂಚಿತ ಅನುಮೋದನೆಯ ಹೋಮ್ ಲೋನ್ ಎಂದರೇನು?

ನೀವು ನಿಮ್ಮ ಕನಸಿನ ಮನೆಯನ್ನು ಗುರುತಿಸುವ ಮೊದಲೇ ಎಚ್ ಡಿ ಎಫ್ ಸಿ ಬ್ಯಾಂಕ್ ಮುಂಚಿತ-ಅನುಮೋದಿತ ಹೋಮ್ ಲೋನ್ ಸೌಲಭ್ಯವನ್ನು ಒದಗಿಸುತ್ತದೆ ಮುಂಚಿತ-ಅನುಮೋದಿತ ಹೋಮ್ ಲೋನ್ ಎಂಬುದು ನಿಮ್ಮ ಆದಾಯ, ಕ್ರೆಡಿಟ್ ಅರ್ಹತೆ ಮತ್ತು ಹಣಕಾಸಿನ ಸ್ಥಿತಿಯ ಆಧಾರದ ಮೇಲೆ ನೀಡುವ ತಾತ್ವಿಕ ಅನುಮೋದನೆಯಾಗಿರುತ್ತದೆ.

ಎಚ್ ಡಿ ಎಫ್ ಸಿ ಬ್ಯಾಂಕಿನೊಂದಿಗೆ ಹೋಮ್ ಲೋನಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡಲು, ಕ್ಲಿಕ್ ಮಾಡಿ ಆನ್‌ಲೈನ್‌ ಅಪ್ಲೈ

ಒಂದುವೇಳೆ ನೀವು ನಮ್ಮಿಂದ ಸಂಪರ್ಕ ಬಯಸಿದಲ್ಲಿ, ದಯವಿಟ್ಟು ನಿಮ್ಮ ವಿವರಗಳನ್ನು ನಮಗೆ ಒದಗಿಸಿ.

ಇಲ್ಲಿ ಕ್ಲಿಕ್ ಮಾಡಿ ಹೋಮ್ ಲೋನ್‌ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು.
 

ಹೋಮ್ ಲೋನ್ ಅಮೊರ್ಟೈಸೇಶನ್ ಶೆಡ್ಯೂಲ್

ಹೋಮ್ ಲೋನ್ FAQ ಗಳು

EMI 'ಸಮಾನ ಮಾಸಿಕ ಕಂತು' ಅನ್ನು ಸೂಚಿಸುತ್ತದೆ, ಇದು ಲೋನ್ ಪೂರ್ಣವಾಗಿ ಮರುಪಾವತಿ ಮಾಡುವವರೆಗೆ ಪ್ರತಿ ತಿಂಗಳು ನಿರ್ದಿಷ್ಟ ದಿನಾಂಕದಂದು ನೀವು ಪಾವತಿಸುವ ಮೊತ್ತವಾಗಿದೆ. EMI ಅಸಲು ಮೊತ್ತ ಮತ್ತು ಬಡ್ಡಿ ಅಂಶ ಒಳಗೊಂಡಿರುತ್ತದೆ, ಅದರ ರಚನೆಯ ರೀತಿಯು ನಿಮ್ಮ ಲೋನ್ ಆರಂಭಿಕ ವರ್ಷಗಳಲ್ಲಿ ಬಡ್ಡಿ ಅಂಶವು ಅಸಲು ಮೊತ್ತಕ್ಕಿಂತ ದೊಡ್ಡದಾಗಿದೆ, ಆದರೆ ಲೋನಿನ ನಂತರದ ಅರ್ಧ ಭಾಗದಲ್ಲಿ, ಅಸಲಿನ ಅಂಶವು ಹೆಚ್ಚು ದೊಡ್ಡದಾಗಿದೆ.

ಲೋನ್ ವಿತರಣೆಯನ್ನು ಮಾಡಿದ ನಂತರದ ತಿಂಗಳಿನಿಂದ EMI ಆರಂಭವಾಗುತ್ತದೆ. ನಿರ್ಮಾಣದಲ್ಲಿರುವ ಆಸ್ತಿಗಳ ಲೋನ್‌ಗಳಿಗಾಗಿ EMI ಸಾಮಾನ್ಯವಾಗಿ ಸಂಪೂರ್ಣ ಹೋಮ್ ಲೋನ್ ವಿತರಣೆಯಾದ ನಂತರ ಪ್ರಾರಂಭವಾಗುತ್ತದೆ ಆದರೆ ಗ್ರಾಹಕರು ತಮ್ಮ ಮೊದಲ ವಿತರಣೆಯನ್ನು ಪಡೆದುಕೊಂಡ ತಕ್ಷಣವೇ EMI ಗಳನ್ನು ಆರಂಭಿಸಲು ಆಯ್ಕೆ ಮಾಡಬಹುದು ಮತ್ತು ಪ್ರತಿಯೊಂದು ನಂತರದ ವಿತರಣೆ ಪ್ರಕಾರ EMI ಗಳ ಅನುಪಾತವನ್ನು ಹೆಚ್ಚಿಸಲಾಗುತ್ತದೆ. ಮರುಮಾರಾಟದ ಸಂದರ್ಭಗಳಲ್ಲಿ, ಸಂಪೂರ್ಣ ಲೋನ್ ಮೊತ್ತವನ್ನು ಒಂದೇ ಬಾರಿಗೆ ವಿತರಿಸಲಾಗುವುದರಿಂದ, ಪೂರ್ಣ ಲೋನ್ ಮೊತ್ತದ ವಿತರಣೆ ಮಾಡಿದ ನಂತರದ ತಿಂಗಳಿನಿಂದಲೇ ಪೂರ್ಣ ಲೋನ್ ಮೊತ್ತದ EMI ಆರಂಭವಾಗುತ್ತದೆ

ಹೋಮ್ ಲೋನ್‌ಗೆ EMI ಕ್ಯಾಲ್ಕುಲೇಟರ್‌ನ ಪ್ರಯೋಜನಗಳು ಈ ಕೆಳಗಿನಂತಿವೆ-

ನಿಮ್ಮ ಹಣಕಾಸನ್ನು ಮುಂಚಿತವಾಗಿ ಯೋಜಿಸಲು ಸಹಾಯ ಮಾಡುತ್ತದೆ

ನಿಮ್ಮ ನಗದು ಹರಿವನ್ನು ಮುಂಚಿತವಾಗಿ ಯೋಜಿಸಲು EMI ಕ್ಯಾಲ್ಕುಲೇಟರ್ ಉಪಯುಕ್ತವಾಗಿದೆ, ಇದರಿಂದಾಗಿ ನೀವು ಹೋಮ್ ಲೋನ್ ಪಡೆದಾಗ ನಿಮ್ಮ ಹೋಮ್ ಲೋನ್ ಪಾವತಿಗಳನ್ನು ಸುಲಭವಾಗಿ ಮಾಡುತ್ತೀರಿ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, EMI ಕ್ಯಾಲ್ಕುಲೇಟರ್ ನಿಮ್ಮ ಹಣಕಾಸಿನ ಯೋಜನೆ ಮತ್ತು ಲೋನ್ ಸೇವಾ ಅಗತ್ಯಗಳಿಗೆ ಉಪಯುಕ್ತ ಸಾಧನವಾಗಿದೆ.

 

ಬಳಸಲು ಸುಲಭ


EMI ಕ್ಯಾಲ್ಕುಲೇಟರ್‌ಗಳು ತುಂಬಾ ಸರಳವಾಗಿವೆ ಮತ್ತು ಬಳಸಲು ಸುಲಭವಾಗಿವೆ. ನೀವು ಮೂರು ಇನ್ಪುಟ್ ಮೌಲ್ಯಗಳನ್ನು ಒದಗಿಸಿದರೆ ಸಾಕು:

 

A. ಲೋನ್ ಮೊತ್ತ
B. ಬಡ್ಡಿ ದರ
C. ಅವಧಿ

 

ಈ ಮೂರು ಇನ್ಪುಟ್ ಮೌಲ್ಯಗಳ ಆಧಾರದ ಮೇಲೆ, ಪ್ರತಿ ತಿಂಗಳು ಹೋಮ್ ಲೋನ್ ಒದಗಿಸುವವರಿಗೆ ನೀವು ಪಾವತಿಸಬೇಕಾದ ಕಂತುಗಳನ್ನು EMI ಕ್ಯಾಲ್ಕುಲೇಟರ್ ಲೆಕ್ಕ ಹಾಕುತ್ತದೆ. ಹೋಮ್ ಲೋನ್‌ನ ಕೆಲವು EMI ಕ್ಯಾಲ್ಕುಲೇಟರ್‌ಗಳು ಸಂಪೂರ್ಣ ಲೋನ್ ಅವಧಿಯಲ್ಲಿ ನೀವು ಪಾವತಿಸುವ ಬಡ್ಡಿ ಮತ್ತು ಅಸಲು ಮೊತ್ತದ ವಿವರವಾದ ವಿವರಗಳನ್ನು ಒದಗಿಸುತ್ತವೆ.

ಆಸ್ತಿ ಹುಡುಕಾಟದ ಮೇಲೆ ಗಮನಹರಿಸಲು ಸಹಾಯ ಮಾಡುತ್ತದೆ

ನಿಮ್ಮ ಹಣಕಾಸು ಸ್ಥಿತಿಗೆ ಸೂಕ್ತವಾಗುವ ಲೋನ್ EMI ಮತ್ತು ಕಾಲಾವಧಿಯನ್ನು ನಿರ್ಧರಿಸಲು ನಿಮಗೆ ಸಹಾಯ ಮಾಡುವ ಮೂಲಕ ನಿಮ್ಮ ಮಾಸಿಕ ಬಜೆಟ್‌ಗೆ ಸೂಕ್ತವಾದ ಸರಿಯಾದ ಹೋಮ್ ಲೋನ್ ಮೊತ್ತವನ್ನು ಪಡೆಯಲು EMI ಕ್ಯಾಲ್ಕುಲೇಟರ್ ನಿಮಗೆ ಸಹಾಯ ಮಾಡುತ್ತದೆ. ಇದು ನಿಮ್ಮ ಆಸ್ತಿ ಹುಡುಕಾಟದ ಮೇಲೆ ಹೆಚ್ಚು ಗಮನಹರಿಸಲು ಸಹಾಯ ಮಾಡುತ್ತದೆ.

ಸುಲಭ ಅಕ್ಸೆಸ್

ಆನ್ಲೈನ್ EMI ಕ್ಯಾಲ್ಕುಲೇಟರ್ ಅನ್ನು ಎಲ್ಲಿಂದಲಾದರೂ ಸುಲಭವಾಗಿ ಆನ್ಲೈನ್‌ನಲ್ಲಿ ಅಕ್ಸೆಸ್ ಮಾಡಬಹುದು. ಸರಿಯಾದ ಹೋಮ್ ಲೋನ್ ಮೊತ್ತ, EMI ಗಳು ಮತ್ತು ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಕಾಲಾವಧಿಯನ್ನು ತಲುಪಲು ಅಗತ್ಯವಿರುವಷ್ಟು ಬಾರಿ ಇನ್ಪುಟ್ ವೇರಿಯೇಬಲ್‌ನ ವಿವಿಧ ಸಂಯೋಜನೆಗಳನ್ನು ನೀವು ಪ್ರಯತ್ನಿಸಬಹುದು.

 

ನೀವು ಹೋಮ್ ಲೋನ್ ಪಡೆಯಬಹುದು ಮತ್ತು ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ಪುಣೆ, ಜೈಪುರ ಮತ್ತು ಇನ್ನೂ ಹೆಚ್ಚಿನ ನಗರಗಳಲ್ಲಿ ನಿಮ್ಮ ಕನಸಿನ ಮನೆಯನ್ನು ಖರೀದಿಸಬಹುದು.

ಮುಂಚಿತ-EMI ಎಂದರೆ ನಿಮ್ಮ ಹೋಮ್ ಲೋನ್ ಮೇಲಿನ ಬಡ್ಡಿಯ ಮಾಸಿಕ ಪಾವತಿಯಾಗಿದೆ. ಲೋನಿನ ಪೂರ್ಣ ವಿತರಣೆಯವರೆಗಿನ ಅವಧಿಗೆ ಈ ಮೊತ್ತವನ್ನು ಪಾವತಿಸಲಾಗುತ್ತದೆ. ಒಮ್ಮೆ ಮುಂಚಿತ-EMI ಹಂತ ಮುಗಿದ ನಂತರ ಅಂದರೆ ಲೋನ್ ಸಂಪೂರ್ಣವಾಗಿ ವಿತರಣೆಯಾದ ನಂತರ ನಿಮ್ಮ ನಿಜವಾದ ಲೋನ್ ಅವಧಿ - ಮತ್ತು EMI (ಅಸಲು ಮತ್ತು ಬಡ್ಡಿ ಎರಡನ್ನೂ ಒಳಗೊಂಡಿರುತ್ತದೆ) ಪಾವತಿಗಳು ಆರಂಭವಾಗುತ್ತದೆ.

ಹೌದು. ನಿಮ್ಮ ಹತ್ತಿರದ ಎಚ್‌ ಡಿ ಎಫ್‌ ಸಿ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ನೀವು ಇದನ್ನು ಮಾಡಬಹುದು.

ಹೋಮ್ ಲೋನನ್ನು ಸಾಮಾನ್ಯವಾಗಿ ಸಮನಾದ ಮಾಸಿಕ ಕಂತುಗಳ (EMI) ಮೂಲಕ ಮರುಪಾವತಿ ಮಾಡಲಾಗುತ್ತದೆ. EMI ಅಸಲು ಮತ್ತು ಬಡ್ಡಿಯ ಅಂಶಗಳನ್ನು ಒಳಗೊಂಡಿರುತ್ತದೆ, ಅವುಗಳನ್ನು ನಿಮ್ಮ ಲೋನಿನ ಆರಂಭಿಕ ವರ್ಷಗಳಲ್ಲಿ, ಬಡ್ಡಿಯ ಅಂಶವು ಅಸಲು ಅಂಶಕ್ಕಿಂತ ಹೆಚ್ಚಾಗಿರುವಂತೆ, ಆದರೆ ಲೋನಿನ ನಂತರದ ಭಾಗದಲ್ಲಿ, ಅಸಲು ಅಂಶವು ಹೆಚ್ಚಾಗಿರುವಂತೆ ರಚಿಸಲಾಗುತ್ತದೆ.

ನಿಮ್ಮ ಅನುಕೂಲಕ್ಕಾಗಿ, ಎಚ್ ಡಿ ಎಫ್ ಸಿ ಬ್ಯಾಂಕ್ ಹೋಮ್ ಲೋನನ್ನು ಮರುಪಾವತಿಸಲು ವಿವಿಧ ವಿಧಾನಗಳನ್ನು ಒದಗಿಸುತ್ತದೆ. ಭಾರತದಲ್ಲಿ ನಿಮ್ಮ ಅನಿವಾಸಿ (ಬಾಹ್ಯ) ಅಕೌಂಟ್ / ಅನಿವಾಸಿ (ಸಾಮಾನ್ಯ) ಅಕೌಂಟಿನಿಂದ ECS (ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್) ಮೂಲಕ ಕಂತುಗಳನ್ನು ಪಾವತಿಸಲು ನೀವು ಪೋಸ್ಟ್-ಡೇಟೆಡ್ ಚೆಕ್‌ಗಳನ್ನು ನೀಡಬಹುದು ಅಥವಾ ನಿಮ್ಮ ಬ್ಯಾಂಕರ್‌ಗೆ ಸ್ಟ್ಯಾಂಡಿಂಗ್ ಸೂಚನೆಗಳನ್ನು ನೀಡಬಹುದು. ನಗದು ಪಾವತಿಗಳನ್ನು ಅಂಗೀಕರಿಸಲಾಗುವುದಿಲ್ಲ.

 

ತಡ ಪಾವತಿ ಮತ್ತು ಚೆಕ್ ಬೌನ್ಸ್ ದಂಡ ಶುಲ್ಕಗಳ ವಿವರಗಳಿಗಾಗಿ, ದಯವಿಟ್ಟು ನಮ್ಮ ನಿರ್ದಿಷ್ಟ ಪ್ರಾಡಕ್ಟ್ ಪೇಜ್‌ನಲ್ಲಿರುವ ಮಾಹಿತಿಯನ್ನು ನೋಡಿ

ಡೆವಲಪರ್ ಮೂಲಕ ನಿರ್ಮಾಣದಲ್ಲಿರುವ ಅಥವಾ ಸಿದ್ಧ ಆಸ್ತಿಯನ್ನು ಖರೀದಿಸಲು, ಮರುಮಾರಾಟ ಆಸ್ತಿಯನ್ನು ಖರೀದಿಸಲು, ಪ್ಲಾಟ್ ಭೂಮಿಯಲ್ಲಿ ಹೌಸಿಂಗ್ ಯುನಿಟ್ ಅನ್ನು ನಿರ್ಮಿಸಲು, ಈಗಾಗಲೇ ಅಸ್ತಿತ್ವದಲ್ಲಿರುವ ಮನೆಗೆ ಸುಧಾರಣೆಗಳು ಮತ್ತು ವಿಸ್ತರಣೆಗಳನ್ನು ಮಾಡಲು ಮತ್ತು ಹಣಕಾಸು ಸಂಸ್ಥೆಯಿಂದ ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನನ್ನು ಎಚ್ ಡಿ ಎಫ್ ಸಿ ಬ್ಯಾಂಕಿಗೆ ಟ್ರಾನ್ಸ್‌ಫರ್ ಮಾಡಲು ಹೋಮ್ ಲೋನ್‌ಗಳನ್ನು ಪಡೆಯಲಾಗುತ್ತದೆ. ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಹೋಮ್ ಲೋನ್ ಎಂದರೇನು

ಎಚ್ ಡಿ ಎಫ್ ಸಿ ಬ್ಯಾಂಕ್ ಹೋಮ್ ಲೋನ್ ಆನ್ಲೈನಿನಲ್ಲಿ ಅಪ್ಲೈ ಮಾಡುವ ಸೌಲಭ್ಯ, ತ್ವರಿತ ಮುಂತಾದ ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ ಲೋನ್ ಪ್ರಕ್ರಿಯೆ, ಆಕರ್ಷಕ ಬಡ್ಡಿ ದರಗಳು, ಕಸ್ಟಮೈಜ್ ಮಾಡಿದ ಮರುಪಾವತಿ ಆಯ್ಕೆಗಳು ಮತ್ತು ಸರಳ ಮತ್ತು ತೊಂದರೆ ರಹಿತ ಡಾಕ್ಯುಮೆಂಟೇಶನ್.

ಲೋನ್ ಮೊತ್ತವನ್ನು ಅವಲಂಬಿಸಿ ಒಟ್ಟು ಆಸ್ತಿ ವೆಚ್ಚದ 10-25% ಅನ್ನು 'ಸ್ವಂತ ಕೊಡುಗೆ' ಎಂದು ನೀವು ಪಾವತಿಸಬೇಕಾಗುತ್ತದೆ. 75 ರಿಂದ 90% ಆಸ್ತಿ ವೆಚ್ಚವನ್ನು ಹೌಸಿಂಗ್ ಲೋನ್ ಆಗಿ ಪಡೆದುಕೊಳ್ಳಬಹುದು. ನಿರ್ಮಾಣದ ಸಂದರ್ಭದಲ್ಲಿ, ಮನೆ ಸುಧಾರಣೆ ಮತ್ತು ಮನೆ ವಿಸ್ತರಣೆ ಲೋನ್‌‌ಗಳು, 75 ರಿಂದ 90% ನಿರ್ಮಾಣ ಹಂತದ / ಸುಧಾರಣೆ / ವಿಸ್ತರಣೆ ಅಂದಾಜುಗಳಿಗೆ ಹಣ ಒದಗಿಸಬಹುದು.

ನೀವು 4 ತ್ವರಿತ ಮತ್ತು ಸುಲಭ ಹಂತಗಳಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ ಹೋಮ್ ಲೋನನ್ನು ಆನ್ಲೈನಿನಲ್ಲಿ ಪಡೆಯಬಹುದು:
1. ಸೈನ್ ಅಪ್ / ನೋಂದಣಿ ಮಾಡಿ
2. ಹೋಮ್ ಲೋನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ
3. ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ
4. ಪ್ರಕ್ರಿಯಾ ಶುಲ್ಕವನ್ನು ಪಾವತಿಸಿ
5. ಲೋನ್ ಅನುಮೋದನೆಯನ್ನು ಪಡೆಯಿರಿ

ನೀವು ಆನ್‌ಲೈನ್‌ನಲ್ಲಿಯೂ ಹೋಮ್ ಲೋನ್‌ಗೆ ಅಪ್ಲೈ ಮಾಡಬಹುದು. ಈಗಲೇ ಅಪ್ಲೈ ಮಾಡಲು https://portal.hdfc.com/ ಗೆ ಭೇಟಿ ನೀಡಿ!.

ಎಚ್ ಡಿ ಎಫ್ ಸಿ ಬ್ಯಾಂಕ್ ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಹೆಚ್ಚಾಗಿ ನಿಮ್ಮ ಆದಾಯ ಮತ್ತು ಮರುಪಾವತಿ ಸಾಮರ್ಥ್ಯದಿಂದ ನಿರ್ಧರಿಸುತ್ತದೆ. ಇತರೆ ಪ್ರಮುಖ ವಿಚಾರಗಳಾದ ವಯಸ್ಸು, ಅರ್ಹತೆ, ಅವಲಂಬಿತರ ಸಂಖ್ಯೆ, ನಿಮ್ಮ ಜತೆಗಾರರ ಆದಾಯ (ಯಾವುದಾದರೂ), ಅಸೆಟ್‌‌ಗಳು ಮತ್ತು ಭಾದ್ಯತೆಗಳು, ಉಳಿತಾಯದ ಇತಿಹಾಸ ಮತ್ತು ಸ್ಥಿರತೆ ಮತ್ತು ಉದ್ಯೋಗದ ವಿಸ್ತರಣೆಯನ್ನು ಒಳಗೊಂಡಿದೆ.

ನೀವು ಮುಂಚಿತ ಅನುಮೋದಿತ ಲೋನಿಗೆ ಅಪ್ಲೈ ಮಾಡಬಹುದು. ನಿಮ್ಮ ಆದಾಯ, ಕ್ರೆಡಿಟ್ ಮೌಲ್ಯಗಳು ಮತ್ತು ಹಣಕಾಸಿನ ಸ್ಥಿತಿಗತಿ ಆಧಾರದಲ್ಲಿ ನೀಡಿದ ಲೋನಿಗೆ ಇದು ಇನ್ ಪ್ರಿನ್ಸಿಪಾಲ್ ಅನುಮೋದನೆಯಾಗಿದೆ. ಸಾಮಾನ್ಯವಾಗಿ, ಮುಂಚಿತ- ಅನುಮೋದಿತ ಲೋನ್‌‌ಗಳನ್ನು ಆಸ್ತಿ ಆಯ್ಕೆಯ ಮೊದಲೇ ತೆಗೆದುಕೊಳ್ಳಲಾಗುವುದು ಮತ್ತು ಲೋನ್ ಮಂಜೂರಾದ 6 ತಿಂಗಳ ಅವಧಿಗೆ ಮಾನ್ಯವಾಗಿರುತ್ತದೆ.

ನಿರ್ಮಾಣದ ಪ್ರಗತಿಯ ಆಧಾರದ ಮೇಲೆ ಎಚ್‌ ಡಿ ಎಫ್‌ ಸಿ ಬ್ಯಾಂಕ್ ನಿರ್ಮಾಣದಲ್ಲಿರುವ ಆಸ್ತಿಗಳಿಗೆ ಕಂತುಗಳಲ್ಲಿ ಲೋನ್‌ಗಳನ್ನು ವಿತರಿಸುತ್ತದೆ. ವಿತರಿಸಲಾದ ಪ್ರತಿ ಕಂತು 'ಭಾಗ' ಅಥವಾ 'ನಂತರದ' ವಿತರಣೆ ಎಂದು ಕರೆಯಲ್ಪಡುತ್ತದೆ.

ಈ ಕೆಳಗಿನ ವಿಧದ ಹೋಮ್ ಲೋನ್‌ಗಳ ಉತ್ಪನ್ನಗಳನ್ನು ಸಾಮಾನ್ಯವಾಗಿ ಭಾರತದಲ್ಲಿ ಹೌಸಿಂಗ್ ಫೈನಾನ್ಸ್ ಸಂಸ್ಥೆಗಳು ಒದಗಿಸುತ್ತವೆ:

 

ಹೋಮ್ ಲೋನ್‌ಗಳು

ಇವುಗಳಿಗಾಗಿ ಲೋನ್‌ಗಳನ್ನು ಪಡೆದುಕೊಳ್ಳಬಹುದು:
 

1. ಅನುಮೋದಿತ ಪ್ರಾಜೆಕ್ಟ್‌‌‌‌‌ಗಳಲ್ಲಿ ಖಾಸಗಿ ಡೆವಲಪರ್ಸ್‌‌ಗಳಿಂದ ಫ್ಲಾಟ್, ಸಾಲು ಮನೆ, ಬಂಗಲೆ ಖರೀದಿ;

2.ಅಭಿವೃದ್ಧಿ ಅಧಿಕಾರಿಗಳಿಂದ ಆಸ್ತಿ ಖರೀದಿಸಲು ಹೋಮ್ ಲೋನ್‌‌ಗಳು ಅವುಗಳೆಂದರೆ DDA, MHADA ಹಾಗೆಯೇ ಈಗಿನ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿಗಳು, ಅಪಾರ್ಟ್ಮೆಂಟ್ ಮಾಲೀಕರ ಸಂಘ ಅಥವಾ ಅಭಿವೃದ್ಧಿ ಅಧಿಕಾರಿಗಳ ವಾಸಸ್ಥಳ ಅಥವಾ ಖಾಸಗಿಯಾಗಿ ನಿರ್ಮಿಸಿದ ಮನೆಗಳು;

3.ಒಂದು ಮುಕ್ತವಾದ / ಲೀಸ್ ಪ್ಲಾಟ್ ಅಥವಾ ಅಭಿವೃದ್ಧಿ ಪ್ರಾಧಿಕಾರ ನೀಡಲಾದ ಪ್ಲಾಟ್ ಅಲ್ಲಿ ನಿರ್ಮಾಣಕ್ಕಾಗಿ ಲೋನ್


ಪ್ಲಾಟ್ ಖರೀದಿ ಲೋನ್

ನೇರ ಹಂಚಿಕೆ ಅಥವಾ ಎರಡನೇ ಮಾರಾಟದ ಟ್ರಾನ್ಸಾಕ್ಷನ್ ಮೂಲಕ ಪ್ಲಾಟ್ ಖರೀದಿಸಲು ಮತ್ತು ಇನ್ನೊಂದು ಬ್ಯಾಂಕ್/ಹಣಕಾಸು ಸಂಸ್ಥೆಯಿಂದ ಪಡೆದ ನಿಮ್ಮ ಅಸ್ತಿತ್ವದಲ್ಲಿರುವ ಪ್ಲಾಟ್ ಖರೀದಿ ಲೋನ್ ಅನ್ನು ವರ್ಗಾಯಿಸಲು ಪ್ಲಾಟ್ ಖರೀದಿ ಲೋನ್ ಪಡೆಯಲಾಗುತ್ತದೆ.


ಬ್ಯಾಲೆನ್ಸ್ ಟ್ರಾನ್ಸ್‌‌ಫರ್ ಲೋನ್

ಬೇರೊಂದು ಬ್ಯಾಂಕ್ / ಹಣಕಾಸು ಸಂಸ್ಥೆಯಿಂದ ಪಡೆದ ನಿಮ್ಮ ಬಾಕಿ ಹೋಮ್ ಲೋನನ್ನು ಎಚ್ ಡಿ ಎಫ್ ಸಿ ಬ್ಯಾಂಕಿಗೆ ವರ್ಗಾಯಿಸುವುದನ್ನು ಬ್ಯಾಲೆನ್ಸ್ ಟ್ರಾನ್ಸ್‌ಫರ್ ಲೋನ್ ಎಂದು ಕರೆಯಲಾಗುತ್ತದೆ.


ಮನೆ ನವೀಕರಣ ಲೋನ್‌ಗಳು

ಮನೆ ನವೀಕರಣ ಲೋನ್ ಟೈಲಿಂಗ್, ಫ್ಲೋರಿಂಗ್, ಆಂತರಿಕ / ಬಾಹ್ಯ ಪ್ಲಾಸ್ಟರ್ ಮತ್ತು ಪೇಂಟಿಂಗ್ ಮುಂತಾದ ಅನೇಕ ರೀತಿಯಲ್ಲಿ ನಿಮ್ಮ ಮನೆಯನ್ನು ನವೀಕರಿಸಲು (ರಚನೆ/ಕಾರ್ಪೆಟ್ ಪ್ರದೇಶವನ್ನು ಬದಲಾಯಿಸದೆ) ಲೋನ್ ಆಗಿದೆ.


ಮನೆ ವಿಸ್ತರಣೆ ಲೋನ್

ನಿಮ್ಮ ಮನೆಯ ವಾಸದ ಜಾಗವನ್ನು ವಿಸ್ತರಿಸುವ ಅಥವಾ ಹೆಚ್ಚುವರಿ ರೂಮ್‌‌ಗಳು ಮತ್ತು ಫ್ಲೋರ್‌‌ಗಳು ಇತ್ಯಾದಿಗಳನ್ನು ಸೇರ್ಪಡೆಗೊಳಿಸಲು ಈ ಲೋನ್ ನೀಡಲಾಗುವುದು.

ವಿವಿಧ ನಗರಗಳಲ್ಲಿ ಹೋಮ್ ಲೋನ್

ನಮ್ಮ ಲೋನ್ ಎಕ್ಸ್‌ಪರ್ಟ್‌ಗಳಿಂದ ಕರೆ ಪಡೆಯಲು ದಯವಿಟ್ಟು ನಿಮ್ಮ ವಿವರಗಳನ್ನು ಶೇರ್ ಮಾಡಿ!

Thank you!

ಧನ್ಯವಾದಗಳು!

ನಮ್ಮ ಲೋನ್ ಪರಿಣಿತರು ನಿಮಗೆ ಆದಷ್ಟು ಬೇಗ ಕರೆ ಮಾಡುತ್ತಾರೆ!

ಸರಿ

ಏನೋ ತಪ್ಪಾಗಿದೆ..!

ದಯವಿಟ್ಟು ಮತ್ತೆ ಪ್ರಯತ್ನಿಸಿ

ಸರಿ

ಹೊಸ ಹೋಮ್ ಲೋನಿಗಾಗಿ ಹುಡುಕುತ್ತಿದ್ದೀರಾ?

ಈ ನಂಬರ್‌ಗೆ ಒಂದು ಮಿಸ್ ಕಾಲ್ ಕೊಡಿ

Phone icon

+91-9289200017

ವೇಗವಾದದ್ದು

ಲೋನ್ ಅವಧಿ

15 ವರ್ಷಗಳು

ಬಡ್ಡಿ ದರ

8.50ವಾರ್ಷಿಕ %.

ಜನಪ್ರಿಯವಾದದ್ದು

ಲೋನ್ ಅವಧಿ

20 ವರ್ಷಗಳು

ಬಡ್ಡಿ ದರ

8.50ವಾರ್ಷಿಕ %.

ಸುಲಭವಾದದ್ದು

ಲೋನ್ ಅವಧಿ

30 ವರ್ಷಗಳು

ಬಡ್ಡಿ ದರ

8.50ವಾರ್ಷಿಕ %.

800 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರಿಗೆ*

* ಈ ದರಗಳು ಇಂದಿನ ಪ್ರಕಾರವಾಗಿದೆ,

ನಿಮಗೆ ಯಾವುದು ತಕ್ಕುದು ಎಂಬುದರ ಬಗ್ಗೆ ಗೊಂದಲವೇ??

Banner
"HDFC ಹೌಸಿಂಗ್ ಫೈನಾನ್ಸ್‌ನಲ್ಲಿ ತ್ವರಿತ ಸೇವೆಗಾಗಿ ಮತ್ತು ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದ"
- ಅವಿನಾಶಕುಮಾರ್ ರಾಜಪುರೋಹಿತ್,ಮುಂಬೈ

ನಿಮ್ಮ ವಿವರಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದ

198341
198341
198341
198341
ಬಾಕಿ ಮನ್ನಾ ಶೆಡ್ಯೂಲ್ ನೋಡಿ

EMI ವಿಂಗಡನೆ ಚಾರ್ಟ್

ಪ್ರತಿ ಲಕ್ಷಕ್ಕೆ ₹ 787/* ರಿಂದ EMI ಆರಂಭ

+91 9289200017
ಹೊಸ ಹೋಮ್ ಲೋನಿಗಾಗಿ