ನಮ್ಮ ಲೋನ್ ಎಕ್ಸ್‌ಪರ್ಟ್‌ಗಳಿಂದ ಕರೆ ಪಡೆಯಲು ದಯವಿಟ್ಟು ನಿಮ್ಮ ವಿವರಗಳನ್ನು ಶೇರ್ ಮಾಡಿ!
ಹೋಮ್ ಲೋನ್ ಅರ್ಹತೆ ನಿಮ್ಮ ಮಾಸಿಕ ಆದಾಯ, ಪ್ರಸ್ತುತ ವಯಸ್ಸು, ಕ್ರೆಡಿಟ್ ಸ್ಕೋರ್, ಸ್ಥಿರ ಮಾಸಿಕ ಹಣಕಾಸಿನ ಜವಾಬ್ದಾರಿಗಳು, ಕ್ರೆಡಿಟ್ ಇತಿಹಾಸ, ನಿವೃತ್ತಿ ವಯಸ್ಸು ಮುಂತಾದ ಅಂಶಗಳ ಮೇಲೆ ಅವಲಂಬಿತವಾಗಿದೆ. ಎಚ್ ಡಿ ಎಫ್ ಸಿ ಬ್ಯಾಂಕ್ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಲೋನ್ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಳ್ಳುವ ಮೂಲಕ ಮನಸ್ಸಿನ ಶಾಂತಿಯನ್ನು ಪಡೆಯಿರಿ
ಈ ಕ್ಯಾಲ್ಕುಲೇಟರ್‌ಗಳನ್ನು ಸಾಮಾನ್ಯ ಸ್ವ-ಸಹಾಯ ಯೋಜನೆ ಟೂಲ್‌ಗಳಾಗಿ ಮಾತ್ರ ಒದಗಿಸಲಾಗುತ್ತದೆ. ಫಲಿತಾಂಶಗಳು ನೀವು ಒದಗಿಸುವ ಊಹೆಗಳನ್ನು ಒಳಗೊಂಡಂತೆ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. ಅವುಗಳ ನಿಖರತೆ, ಅಥವಾ ನಿಮ್ಮ ಸನ್ನಿವೇಶಗಳಿಗೆ ಅನ್ವಯವಾಗುವುದನ್ನು ನಾವು ಖಾತರಿಪಡಿಸುವುದಿಲ್ಲ.
NRI ನಿವ್ವಳ ಆದಾಯವನ್ನು ನಮೂದಿಸಬೇಕು.
ಹೋಮ್ ಲೋನ್ ಅರ್ಹತೆಯನ್ನು ಮಾನದಂಡದ ಆಧಾರದ ಮೇಲೆ ವ್ಯಾಖ್ಯಾನಿಸಲಾಗುತ್ತದೆ, ಇದರ ಆಧಾರದಲ್ಲಿ ಹಣಕಾಸು ಸಂಸ್ಥೆಯು ನಿರ್ದಿಷ್ಟ ಲೋನ್ ಮೊತ್ತವನ್ನು ಪಡೆಯಲು ಮತ್ತು ಮರುಪಾವತಿಸಲು ಗ್ರಾಹಕರ ಸಾಲದ ಯೋಗ್ಯತೆಯನ್ನು ಮೌಲ್ಯಮಾಪನ ಮಾಡುತ್ತದೆ. ಹೋಮ್ ಲೋನ್ ಅರ್ಹತೆಯು ವಯಸ್ಸು, ಹಣಕಾಸಿನ ಸ್ಥಿತಿ, ಕ್ರೆಡಿಟ್ ಹಿಸ್ಟ್ರಿ, ಕ್ರೆಡಿಟ್ ಸ್ಕೋರ್, ಇತರ ಹಣಕಾಸಿನ ಜವಾಬ್ದಾರಿಗಳು ಇತ್ಯಾದಿಗಳಂತಹ ಮಾನದಂಡಗಳನ್ನು ಅವಲಂಬಿಸಿರುತ್ತದೆ.
ಉದಾಹರಣೆಗೆ, ಒಬ್ಬ ವ್ಯಕ್ತಿಯು 30 ವರ್ಷ ವಯಸ್ಸಿನವರಾಗಿದ್ದರೆ ಮತ್ತು ₹30,000 ಮಾಸಿಕ ಸಂಬಳ ಹೊಂದಿದ್ದರೆ, ಅವರು ₹20.49 ಲಕ್ಷ ಲೋನ್ ಅನ್ನು 30 ವರ್ಷಗಳ ಅವಧಿಗೆ 6.90% ಬಡ್ಡಿ ದರದಲ್ಲಿ ಪಡೆಯಬಹುದು. ಅವರು ಪರ್ಸನಲ್ ಲೋನ್ ಅಥವಾ ಕಾರ್ ಲೋನ್ ಮುಂತಾದ ಯಾವುದೇ ಇತರ ಹಣಕಾಸಿನ ಜವಾಬ್ದಾರಿಗಳನ್ನು ಹೊಂದಿರಬಾರದು.
ಹೌಸಿಂಗ್ ಲೋನ್ ಅರ್ಹತೆಯು ಪ್ರಾಥಮಿಕವಾಗಿ ವ್ಯಕ್ತಿಯ ಆದಾಯ ಮತ್ತು ಮರುಪಾವತಿ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ವಯಸ್ಸು, ಹಣಕಾಸಿನ ಸ್ಥಿತಿ, ಕ್ರೆಡಿಟ್ ಇತಿಹಾಸ, ಕ್ರೆಡಿಟ್ ಸ್ಕೋರ್, ಇತರ ಹಣಕಾಸಿನ ಜವಾಬ್ದಾರಿಗಳು ಹೋಮ್ ಲೋನ್‌ಗಳ ಅರ್ಹತೆಯನ್ನು ನಿರ್ಧರಿಸುವ ಇತರ ಅಂಶಗಳಾಗಿವೆ.
ಹೋಮ್ ಲೋನ್ ಗೆ ಅರ್ಹತೆಯನ್ನು ಈ ಮೂಲಕ ಹೆಚ್ಚಿಸಬಹುದು
ಎಚ್ ಡಿ ಎಫ್ ಸಿ ಬ್ಯಾಂಕಿನ ಅರ್ಹತಾ ಕ್ಯಾಲ್ಕುಲೇಟರ್ ಆನ್ಲೈನಿನಲ್ಲಿ ಹೌಸಿಂಗ್ ಲೋನ್‌ಗಳಿಗೆ ಅರ್ಹತೆಯನ್ನು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ.
ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಅರ್ಹತೆ ಮತ್ತು EMI ಮೊತ್ತದ ಸೂಚನೆಯನ್ನು ನೀವು ಪಡೆದ ನಂತರ, ನೀವು ಎಚ್ ಡಿ ಎಫ್ ಸಿ ಬ್ಯಾಂಕಿನ ಆನ್ಲೈನ್ ಹೋಮ್ ಲೋನ್‌ಗಳೊಂದಿಗೆ ನಿಮ್ಮ ಮನೆಯಿಂದಲೇ ಸುಲಭವಾಗಿ ಹೋಮ್ ಲೋನಿಗೆ ಅಪ್ಲೈ ಮಾಡಬಹುದು.
ಎಚ್ ಡಿ ಎಫ್ ಸಿ ಬ್ಯಾಂಕಿನೊಂದಿಗೆ ಆನ್ಲೈನಿನಲ್ಲಿ ಹೋಮ್ ಲೋನಿಗೆ ಅಪ್ಲೈ ಮಾಡಲು, ಕ್ಲಿಕ್ ಮಾಡಿ
ಒಂದುವೇಳೆ ನೀವು ನಮ್ಮಿಂದ ಸಂಪರ್ಕ ಬಯಸಿದಲ್ಲಿ, ದಯವಿಟ್ಟು ನಿಮ್ಮ ವಿವರಗಳನ್ನು ನಮಗೆ ಒದಗಿಸಿ. ನೀವು ನಿಮ್ಮ ಕನಸಿನ ಮನೆಯನ್ನು ಗುರುತಿಸುವ ಮೊದಲೇ ಎಚ್ ಡಿ ಎಫ್ ಸಿ ಬ್ಯಾಂಕ್ ಮುಂಚಿತ-ಅನುಮೋದಿತ ಹೋಮ್ ಲೋನ್ ಸೌಲಭ್ಯವನ್ನು ಕೂಡ ಒದಗಿಸುತ್ತದೆ.
ಈ ಕ್ಯಾಲ್ಕುಲೇಟರ್‌ಗಳನ್ನು ಸಾಮಾನ್ಯ ಸ್ವ-ಸಹಾಯ ಯೋಜನೆ ಟೂಲ್‌ಗಳಾಗಿ ಮಾತ್ರ ಒದಗಿಸಲಾಗುತ್ತದೆ. ಫಲಿತಾಂಶಗಳು ನೀವು ಒದಗಿಸುವ ಊಹೆಗಳನ್ನು ಒಳಗೊಂಡಂತೆ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. ಅವುಗಳ ನಿಖರತೆ, ಅಥವಾ ನಿಮ್ಮ ಸನ್ನಿವೇಶಗಳಿಗೆ ಅನ್ವಯವಾಗುವುದನ್ನು ನಾವು ಖಾತರಿಪಡಿಸುವುದಿಲ್ಲ.