ಪೂರ್ವಪಾವತಿ ಎಂಬುದು ನಿಮ್ಮ ಲೋನ್ ಅವಧಿಯನ್ನು ಪೂರ್ಣಗೊಳಿಸುವ ಮೊದಲು ನಿಮ್ಮ ಹೌಸಿಂಗ್ ಲೋನನ್ನು (ಭಾಗಶಃ ಅಥವಾ ಪೂರ್ಣವಾಗಿ) ಮರುಪಾವತಿಸಲು ಅನುವು ಮಾಡಿಕೊಡುವ ಸೌಲಭ್ಯವಾಗಿದೆ.
ನಿಮ್ಮ ಹೌಸಿಂಗ್ ಲೋನಿನ ಮುಂಪಾವತಿಯನ್ನು ಪರಿಗಣಿಸುವ ಮೊದಲು, ವೈದ್ಯಕೀಯ ಅಗತ್ಯತೆಗಳು ಮತ್ತು ಮದುವೆ, ವಿದೇಶ ಪ್ರಯಾಣ ಇತ್ಯಾದಿಗಳಂತಹ ನಿಮ್ಮ ಹಣಕಾಸಿನ ಗುರಿಗಳಿಗೆ ನೀವು ಸಾಕಷ್ಟು ಹಣವನ್ನು ಹೊಂದಿದ್ದೀರಿ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ನಿಮ್ಮ ಹೋಮ್ ಲೋನ್ ಅನ್ನು ಮುಂಚಿತವಾಗಿ ಪಾವತಿಸಲು ನೀವು ಎಲ್ಲಾ ಹಣವನ್ನು ಖರ್ಚು ಮಾಡಬೇಡಿ. ಯಾಕೆಂದರೆ, ಅದರಿಂದಾಗಿ ನಿಮಗೆ ಹಣದ ಅಗತ್ಯವಿದ್ದಾಗ ಕೈಯಲ್ಲಿ ಹಣ ಇಲ್ಲದಿರಬಹುದು.
ಫ್ಲೋಟಿಂಗ್ ದರದ ಹೋಮ್ ಲೋನ್‌ಗಳು ವ್ಯಕ್ತಿಗಳಿಂದ ಯಾವುದೇ ಪ್ರಿ-ಕ್ಲೋಸರ್/ಫೋರ್-ಕ್ಲೋಸರ್ ಶುಲ್ಕಗಳನ್ನು ಆಕರ್ಷಿಸುವುದಿಲ್ಲ.
ಕಾಂಬಿನೇಶನ್ ದರದ ಹೋಮ್ ಲೋನ್‌ಗಳ ಸಂದರ್ಭದಲ್ಲಿ, ಲೋನಿನ ಫಿಕ್ಸೆಡ್ ಅವಧಿಯಲ್ಲಿ ಲೋನನ್ನು ಪೂರ್ವಪಾವತಿ ಮಾಡಿದರೆ ಮತ್ತು ಅಂತಹ ಪೂರ್ವಪಾವತಿಯನ್ನು ವ್ಯಕ್ತಿಯ ಸ್ವಂತ ಫಂಡ್‌ಗಳಿಂದ ಅಲ್ಲದೆ ಬ್ಯಾಲೆನ್ಸ್ ಟ್ರಾನ್ಸ್‌ಫರ್/ಮರುಫೈನಾನ್ಸ್ ಉದ್ದೇಶಕ್ಕಾಗಿ ಇನ್ನೊಂದು ಸಾಲದಾತರಿಂದ ಪಡೆದ ಮೊತ್ತದಿಂದ ಮಾಡಿದರೆ ಸಾಲದಾತರು ಪೂರ್ವಪಾವತಿ ಶುಲ್ಕಗಳನ್ನು ವಿಧಿಸಬಹುದು. ಆದಾಗ್ಯೂ, ನಿಮ್ಮ ಹೌಸಿಂಗ್ ಲೋನನ್ನು ಮುಂಗಡ ಪಾವತಿಸಲು ನೀವು ನಿಮ್ಮ ಸ್ವಂತ ಹಣವನ್ನು ಬಳಸಿದರೆ, ಯಾವುದೇ ಮುಂಗಡ ಪಾವತಿ ದಂಡವನ್ನು ವಿಧಿಸಲಾಗುವುದಿಲ್ಲ.
ಹೌಸಿಂಗ್ ಲೋನ್ ಸೇವೆಗಳು ಸುಲಭವಾಗಿ ಲಭ್ಯವಿವೆ ; ಹೋಮ್ ಲೋನ್‌ಗಳ ಮೇಲಿನ ಬಡ್ಡಿ ದರವು ಸಾಮಾನ್ಯವಾಗಿ ಪರ್ಸನಲ್ ಅಥವಾ ಕ್ರೆಡಿಟ್ ಕಾರ್ಡ್ ಲೋನ್‌ಗಳ ಮೇಲೆ ವಿಧಿಸಲಾಗುವ ಬಡ್ಡಿ ದರಕ್ಕಿಂತ ಕಡಿಮೆಯಾಗಿರುತ್ತದೆ. ಆದ್ದರಿಂದ, ನೀವು ಸಾಲವನ್ನು ಕಡಿಮೆ ಮಾಡಲು ಬಯಸಿದರೆ, ಕಡಿಮೆ ಬಡ್ಡಿ ದರವನ್ನು ಹೊಂದಿರುವ ಹೌಸಿಂಗ್ ಲೋನ್‌ಗಳಿಗೆ ಹೋಲಿಸಿದರೆ ಹೆಚ್ಚಿನ ಬಡ್ಡಿ-ಭರಿಸುವ ಲೋನ್‌ಗಳನ್ನು ಆದ್ಯತೆಯ ಮೇಲೆ ಮುಂಗಡ ಪಾವತಿ ಮಾಡುವುದನ್ನು ನೀವು ಪರಿಗಣಿಸಬಹುದು.
ನೀವು ಅಸಲು ಮರುಪಾವತಿಯ ಮೇಲೆ ಮತ್ತು ಹೌಸಿಂಗ್ ಲೋನ್‌ಗಳಿಗೆ ಪಾವತಿಸಿದ ಬಡ್ಡಿಯ ಮೇಲೆ ತೆರಿಗೆ ವಿನಾಯಿತಿಯನ್ನು ಕ್ಲೈಮ್ ಮಾಡಲು ಅರ್ಹರಾಗಿದ್ದೀರಿ (ನಿರ್ದಿಷ್ಟ ಮೊತ್ತಗಳಲ್ಲಿ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ). ಇದಲ್ಲದೆ, ಸರ್ಕಾರದ 'ಎಲ್ಲರಿಗೂ ವಸತಿ' ಸೌಲಭ್ಯದ ಮೂಲಕ, ಹೌಸಿಂಗ್ ಲೋನ್‌ಗಳ ಮೇಲಿನ ತೆರಿಗೆ ಇನ್ಸೆಂಟಿವ್‌ಗಳು ಕಾಲಕಾಲಕ್ಕೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ನಿಮ್ಮ ಹೌಸಿಂಗ್ ಲೋನ್‌ನ ಪೂರ್ಣ ಪೂರ್ವಪಾವತಿಯನ್ನು ಮಾಡಿದರೆ, ನೀವು ಈ ಮೇಲೆ ಹೇಳಲಾದ ತೆರಿಗೆ ಪ್ರಯೋಜನಗಳನ್ನು ಪಡೆಯುವುದಿಲ್ಲ ; ಭಾಗಶಃ ಪೂರ್ವಪಾವತಿಗಳ ಸಂದರ್ಭದಲ್ಲಿ, ನೀವು ಅದಕ್ಕೆ ಅನುಗುಣವಾಗಿ ಕಡಿಮೆ ತೆರಿಗೆ ಪ್ರಯೋಜನಗಳನ್ನು ಪಡೆಯುತ್ತೀರಿ.